ಬಾಕ್ಸ್ ಆಫೀಸ್’ನಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ RRR

ಬೆಂಗಳೂರು, ಮಾರ್ಚ್ 30, 2022 (www.justkannada.in): ರಾಜಮೌಳಿ ನಿರ್ದೇಶನದ ಸಿನಿಮಾ RRR ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ಹೊಸ ದಾಖಲೆಗಳನ್ನೂ ಸೃಷ್ಟಿಮಾಡುತ್ತಿದೆ.

RRR ಬಾಕ್ಸಾಫೀಸ್‌ನಲ್ಲೂ ಜಾದು ಮಾಡುತ್ತಿದೆ. ಈ ಸಿನಿಮಾ ರಾಜಮೌಳಿ ಬರೆದ ‘ಬಾಹುಬಲಿ’ ದಾಖಲೆಯನ್ನು ಅಳಿಸಿ ಹಾಕುತ್ತಾ? ಎನ್ನುವ ಕುತೂಹಲವಿದೆ.

RRR ನಾಲ್ಕೇ ದಿನಕ್ಕೆ 500 ಕೋಟಿ ಗಳಿಕೆ ಮಾಡಿತ್ತು. ಹೀಗಾಗಿ ಐದನೇ ದಿನದಿಂದ ಸಿನಿಮಾದ ಕಲೆಕ್ಷನ್ ಎಷ್ಟಾಗುತ್ತೆ ಎನ್ನುವುದು ಕುತೂಹಲ ಕೆರಳಿಸಿದೆ. ಹಿಂದಿ, ತೆಲುಗು ಹಾಗೂ ವಿದೇಶದಲ್ಲೂ ಬಾಕ್ಸಾಫೀಸ್‌ನಲ್ಲಿ ಜೋರಾಗಿಯೇ ಸದ್ದು ಮಾಡುತ್ತಿದೆ.

ಹಿಂದಿಯಲ್ಲಿ ಮೊದಲ ದಿನ 19 ಕೋಟಿ ಗಳಿಸಿತ್ತು. ಎರಡನೇ ದಿನ 24 ಕೋಟಿ, ಮೂರನೇ ದಿನ 31.50 ಕೋಟಿ ಹಾಗೂ ನಾಲ್ಕನೇ ದಿನ 17 ಕೋಟಿ ಲೂಟಿ ಮಾಡಿದೆ. ಒಟ್ಟು 91.50 ಕೋಟಿ ಇದೂವರೆಗೂ ಗಳಿಸಿದೆ. ಐದನೇ ದಿನ (ಮಾರ್ಚ್ 29)ದಂದು 10 ಕೋಟಿಗೂ ಅಧಿಕ ಗಳಿಸುತ್ತೆ ಎಂದು ಹೇಳಲಾಗಿದ್ದು, ಕೇವಲ ಹಿಂದಿ ವರ್ಷನ್ 100 ಕೋಟಿ ಗಳಿಸಲಿದೆ.