ಹಲಾಲ್ ವಿಚಾರ: ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನೆ ನೀಡಿದ್ರೆ ಕ್ರಮ- ಗೃಹ ಸಚಿವ ಅರಗ ಜ್ಞಾನೇಂದ್ರ ಎಚ್ಚರಿಕೆ

ಬೆಂಗಳೂರು,ಮಾರ್ಚ್,30,2022(www.justkannada.in):  ಹಿಜಾಬ್ , ಮುಸ್ಲೀಂ ವ್ಯಾಪಾರಿಗಳಿಗೆ ನಿರ್ಬಂಧ, ಕಾಶ್ಮೀರಿ ಫೈಲ್ ಸಿನಿಮಾ ಬಳಿಕ ಇದೀಗ ಹಲಾಲ್ ಮಾಂಸ ಖರೀದಿ ವಿಚಾರ ಬಾರಿ ಸದ್ಧು ಮಾಡುತ್ತಿದ್ದು ಈ ಮಧ್ಯೆ ಹಲಾಲ್ ಮಾಂಸ ಖರೀದಿಸದಂತೆ ಹಿಂದೂ ಪರ ಸಂಘಟನೆಗಳು ಹಿಂದೂಗಳಿಗೆ ಮನವಿ ಮಾಡಿವೆ.

ಇದೇ ವಿಚಾರದ ಬಗ್ಗೆ ಸಾಕಷ್ಟಯ ಚರ್ಚೆಯಾಗುತ್ತಿದ್ದು ಈ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, ಹಲಾಲ್ ಮಾಂಸ ಖರೀದಿ ನಿಷೇಧ ವಿಚಾರ ಚರ್ಚೆ ನಡೆಯುತ್ತಿದೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನೆ ನೀಡಿದರೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಯುಗಾದಿ ಹಬ್ಬ ಹಿನ್ನೆಲೆ ಈ ಬಗ್ಗೆ ಚರ್ಚೆ ನಡೆಯುತ್ತಿದೆ.  ಹಲಾಲ್ ನಮ್ಮ ದೇವರಿಗೆ ಆಗಲ್ಲ ಎಂದು ಚರ್ಚೆ ನಡೆದಿದೆ ಹಲಾಲ್ ಮಾಂಸ ಖರಿಸಿದಲ್ಲ ಎಂದು ಪ್ರತಿಕ್ರಿಯೆ ಬಂದಿದೆ. ಈ ಬಗ್ಗೆ ಚರ್ಚೆ ಮಾಡಿದರೇ ತಪ್ಪೇನು ಇಲ್ಲ ಇದು ವಿಕೋಪಕ್ಕೆ ಹೋಗಬಾರದು ಎಂದರು.

Key words: Halal -action – social media-Home Minister- Araga Jnanendra