ಮುತ್ತಪ್ಪ ರೈ ಬಯೋಪಿಕ್;ನಲ್ಲಿ ರಿಯಲ್ ಸ್ಟಾರ್ ಉಪ್ಪಿ: ರಾಮ್ ಗೋಪಾಲ್ ವರ್ಮಾ ಡೈರೆಕ್ಷನ್

ಬೆಂಗಳೂರು, ಮಾರ್ಚ್ 30, 2022 (www.justkannada.in): ರಿಯಲ್ ಸ್ಟಾರ್ ಉಪೇಂದ್ರ ಅವರ ಮತ್ತೊಂದು ಸಿನಿಮಾ ಪ್ರಕಟ ಆಗಿದೆ. ವಿಶೇಷ ಎಂದರೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಜೊತೆಗೆ ನಟ ಉಪೇಂದ್ರ ಕೈ ಜೋಡಿಸಿದ್ದಾರೆ.

ಈ‌ ವಿಚಾರವನ್ನು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸ್ವತಃ ತಾವೇ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದರು. ಚಿತ್ರದ ಟೈಟಲ್ ಕೂಡ ರಿವೀಲ್ ಆಗಿದೆ.

ಮುತ್ತಪ್ಪ ರೈ ಜೀವನವನ್ನು ಸಿನಿಮಾ ಮಾಡುವುದಾಗಿ ಕೆಲ ವರ್ಷಗಳ ಹಿಂದೆಯೇ ರಾಮ್ ಗೋಪಾಲ್ ವರ್ಮಾ ಘೋಷಿಸಿದ್ದರು. ಮುತ್ತಪ್ಪ ರೈ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್ ನಟಿಸುವುದು ನಿಶ್ಚಯವಾಗಿತ್ತು.

ಅದ್ಧೂರಿ ಕಾರ್ಯಕ್ರಮ ಮಾಡಿ ಸಿನಿಮಾ ಲಾಂಚ್ ಕೂಡ ಮಾಡಲಾಯಿತು. ಆದರೆ ಕಾರಣಾಂತರಗಳಿಂದ ಸಿನಿಮಾ ಸೆಟ್ಟೇರಲಿಲ್ಲ. ಈಗ ಮುತ್ತಪ್ಪ ರೈ ಪಾತ್ರ ಉಪೇಂದ್ರ ಪಾಲಾಗಿದೆ. ಉಪ್ಪಿ ಕೂಡ ಇದಕ್ಕೆ ಓಕೆ ಎಂದಿದ್ದಾರೆ.

ಉಪೇಂದ್ರ-ವರ್ಮಾ ಸಿನಿಮಾ ಕನ್ನಡ ಸೇರಿದಂತೆ ಇತರ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಂಡು ಬಿಡುಗಡೆ ಆಗಲಿದೆ. ಭೂಗತ ಲೋಕದ ಕತೆಗಳನ್ನು ತೆರೆ ಮೇಲೆ ತರುವುದರಲ್ಲಿ ರಾಮ್ ಗೋಪಾಲ್ ವರ್ಮಾ ಸೂಪರ್ ಎನಿಸಿಕೊಂಡಿದ್ದಾರೆ.