‘ಕೆಜಿಎಫ್-2’ಗೆ All the Best ಹೇಳಿದ ಅಶ್ವಿನಿ ಪುನೀತ್ ರಾಜ್‍ಕುಮಾರ್

ಬೆಂಗಳೂರು, ಮಾರ್ಚ್ 30, 2022 (www.justkannada.in): ಪುನೀತ್ ರಾಜ್‍ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ‘ಕೆಜಿಎಫ್-2’ ಚಿತ್ರದ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ.

‘ಕೆಜಿಎಫ್-2’ (KGF 2 Trailer) ಟ್ರೇಲರ್ ನೋಡಿ ತಮ್ಮ ಅಧಿಕೃತ ಖಾತೆಯಲ್ಲಿ ಟ್ಬೀಟ್ ಮಾಡಿರುವ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು, ‘ #KGFChapter2 ಟ್ರೇಲರ್ ಅದ್ಭುತವಾಗಿದೆ. ?Best wishes to the entire team and @hombalefilms for producing amazing films right from ‘Ninnindale’. A big thanks to you all for dedicating this film to Appu ?’ ಎಂದು ಬರೆದುಕೊಂಡಿದ್ದಾರೆ.

ಜೊತೆಗೆ @VKiragandur @TheNameIsYash @prashanth_neel ಅವರನ್ನು ಟ್ಯಾಗ್ ಮಾಡಿ ಕನ್ನಡ ಚಿತ್ರಕ್ಕೆ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ. ಈ ಮೂಲಕ ದೊಡ್ಮನೆಯ ಪರಂಪರೆಯನ್ನು ದೊಡ್ಮನೆಯ ಸೊಸೆ ಮುಂದುವರಿಸಿಕೊಂಡು ಬಂದಿದ್ದಾರೆ.