Tuesday, September 8, 2026

BDA Apartments

Home Front Page ಈಗ ಸೋತಿರಬಹುದು: ಮುಂದೆ ಒಂದು ದಿನ ಗೆದ್ದೇ ಗೆಲ್ಲುವೆ- ಪರಾಜಿತ ‘ಕೈ’ ಅಭ್ಯರ್ಥಿ ಕುಸುಮಾ…

ಈಗ ಸೋತಿರಬಹುದು: ಮುಂದೆ ಒಂದು ದಿನ ಗೆದ್ದೇ ಗೆಲ್ಲುವೆ- ಪರಾಜಿತ ‘ಕೈ’ ಅಭ್ಯರ್ಥಿ ಕುಸುಮಾ…

ಬೆಂಗಳೂರು,ನವೆಂಬರ್,11,2020(www.justkannada.in): ರಾಜ್ಯದಲ್ಲಿ ಕುತೂಹಲ ಕೆರಳಿಸಿದ್ದ ಆರ್.ಆರ್ ನಗರ ಮತ್ತು  ಶಿರಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು ಕಾಂಗ್ರೆಸ್ ಮತ್ತುಜೆಡಿಎಸ್ ಪರಾಭವಗೊಂಡಿವೆ.kannada-journalist-media-fourth-estate-under-loss

ಈ ಮಧ್ಯೆ ತಮ್ಮ ಸೋಲಿನ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ, ಈ ಚುನಾವಣೆಯಲ್ಲಿ ಸೋತಿರಬಹುದು. ಮುಂದೆ ಒಂದು ದಿನ ಗೆದ್ಧೇ ಗೆಲ್ಲುವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.rr-nagar-by-election-congress-candidate-kusuma-next-win

ಮಾಧ್ಯಮಗಳ ಜತೆ ಇಂದು ಮಾತನಾಡಿದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಕುಸುಮಾ, ಜನಾದೇಶಕ್ಕೆ ತಲೆಬಾಗುವೆ. ನಾನು ಜೀವನದಲ್ಲಿ ಸೋತು ಗೆದ್ಧವಳು. ಹೀಗಾಗಿ ಮುಂದೆ ಒಂದು ದಿನ ಗೆದ್ದೇ ಗೆಲ್ಲುವ ವಿಶ್ವಾಸವಿದೆ. ಮುಂದೆ ನಾನು ಜನಪರ ಹೋರಾಟದಲ್ಲಿ ಪಾಲ್ಗೊಳ್ಳುವೆ.  ನನ್ನ ಮೇಲೆ ಪ್ರೀತಿ ತೋರಿಸಿದ ಜನರಿಗೆ ಧನ್ಯವಾದಗಳು ಎಂದಿದ್ದಾರೆ.

Key words: RR Nagar- by-election- congress –candidate- Kusuma – next – win