ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ರೌಡಿಶೀಟರ್ ಅರೆಸ್ಟ್….

ಮೈಸೂರು,ಅ,26,2019(www.justkannada.in): ಮೈಸೂರಿನಲ್ಲಿ ಪೊಲೀಸ್  ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ರೌಡಿಶೀಟರ್  ನನ್ನ ದೇವರಾಜ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸೋಮಶೇಖರ್ ಅಲಿಯಾಸ್ ಸೋಮ ಬಂಧಿತ ರೌಡಿ ಶೀಟರ್. ಫಾಸ್ಟ್‌ಪುಡ್ ಮುಚ್ಚುವ ವಿಚಾರವಾಗಿ  ರೌಡಿಶೀಟರ್ ಸೋಮಶೇಖರ್ ಕರ್ತವ್ಯದಲ್ಲಿದ್ದ ಮುಖ್ಯಪೇದೆ  ಮಂಜುನಾಥ್‌ಗೆ ಮೇಲೆ ಹಲ್ಲೆ ಮಾಡಿದ್ದನು. ಅ.19ರ ರಾತ್ರಿ ಮೈಸೂರಿನಲ್ಲಿ ಘಟನೆ ನಡೆದಿತ್ತು. ಹಲ್ಲೆ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿತ್ತು.

ರೌಡಿಶೀಟರ್ ಸೋಮು ಸಹೋದರಿ ಲತಾ ಪಾಸ್ಟ್ ಫುಡ್  ಅಂಗಡಿ ನಡೆಸುತ್ತಿದ್ದರು. ಅ.19 ರಂದು ರಾತ್ರಿ 11ಗಂಟೆಯಾದರೂ ಅಂಗಡಿ ಓಪನ್ ಆಗಿತ್ತು. ಈ ವೇಳೆ ಅಂಗಡಿ ಮುಚ್ಚುವಂತೆ ಪೇದೆ ಮಂಜುನಾಥ್ ಸೂಚಿಸಿದ್ದರು. ಈ ವೇಳೆ ಪೋಲಿಸ್ ಪೇದೆ ಮಂಜುನಾಥ್, ಸೋಮ ನಡುವೆ  ವಾಗ್ವಾದ ಮಾತಿನ ಚಕಮಕಿ ನಡೆದಿತ್ತು. ಈ ಸಂದರ್ಭದಲ್ಲಿ ಸೋಮು ಮುಖ್ಯಪೇದೆ ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದನು.

ರೌಡಿಶೀಟರ್ ಸೋಮ, ಆತನ‌ ಸಹೋದರ ಚಂದ್ರಶೇಖರ್, ಸಹೋದರಿ ಲತಾ ವಿರುದ್ಧ ದೇವರಾಜ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು..ಹಲ್ಲೆ ಪ್ರಕರಣದಲ್ಲಿ ಸೋಮು A1 ಆಗಿದ್ದು, ಘಟನೆ ನಂತರ ತಲೆ ಮರೆಸಿಕೊಂಡಿದ್ದನು.ಇದೀಗ ಆರೋಪಿಯನ್ನ ಬಂಧಿಸಿದ ದೇವರಾಜ ಠಾಣೆ ಪೊಲೀಸರು ಬಂಧಿತ ರೌಡಿಶೀಟರ್‌ನ್ನ  ಹಲ್ಲೆ ಮಾಡಿದ್ದ ಸ್ಥಳಕ್ಕೆ ಕರೆದೊಯ್ದು ಸ್ಥಳ ಮಹಜರ್‌ ಮಾಡಿದ್ದಾರೆ.  ಇನ್ಸ್ ಪೆಕ್ಟರ್ ಪ್ರಸನ್ನ ಕುಮಾರ್ ನೇತೃತ್ವದಲ್ಲಿ ಸ್ಥಳ ಮಹಜರು ಮಾಡಲಾಯಿತು.

Key words: Rowdisheater- Arrest- assaulted –police-mysore..