ವೇಗವಾಗಿ ಚಲಿಸುತ್ತಿದ್ದ ಲಾರಿಯಿಂದ ಬಿದ್ದು ಕೂಲಿ ಕಾರ್ಮಿಕ ಸಾವು…

ಮೈಸೂರು,ಜು,29,2020(www.justkannada.in):  ವೇಗವಾಗಿ ಚಲಿಸುತ್ತಿದ್ದ ಲಾರಿಯಿಂದ ಬಿದ್ದು ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಊಟಿ ರೋಡ್ ಟೋಲ್ ಗೇಟ್ ಬಳಿ ಈ ಘಟನೆ ನಡೆದಿದೆ.  ಗೌಸಿಯಾ ನಗರದ ಫಾಸಿಲ್(20) ಮೃತ ಕಾರ್ಮಿಕ. ಮೈಸೂರಿನಿಂದ ಗುಂಡ್ಲುಪೇಟೆಗೆ ಲಾರಿ ತೆರಳುತ್ತಿತ್ತು. ಗುಂಡ್ಲುಪೇಟೆಯಲ್ಲಿ ಹೂವು ಲೋಡ್ ಮಾಡಿಕೊಂಡು ಬರಲು ಕ್ರೇಟ್‌ಗಳ ಸಮೇತ  ತೆರಳುತ್ತಿತ್ತು. mysore-worker-dies-r-falling-moving-truck

ಈ ವೇಳೆ ಲಾರಿಯ ವೇಗಕ್ಕೆ ಕ್ರೇಟ್ ಗಳು ಉರುಳುತ್ತಿದ್ದವು. ಉರುಳುತ್ತಿದ್ದ ಕ್ರೇಟ್ ಗಳನ್ನ ಹಿಡಿಯಲು ಹೋದ ಫಾಸಿಲ್ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಈ ಸಂದರ್ಭದಲ್ಲಿ ತೀವ್ರ ಗಾಯಗೊಂಡ ಫಾಸಿಲ್ ನನ್ನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡುವ ವೇಳೆ ಮಾರ್ಗ ಮಧ್ಯದಲ್ಲೇ ಕಾಸಿಲ್ ಕೊನೆಯುಸಿರೆಳೆದಿದ್ದಾನೆ.  ಸ್ಥಳಕ್ಕೆ ಮೈಸೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: mysore- worker- dies -r falling – moving -truck