ನಂಜನಗೂಡಿಗೆ ಕುಟುಂಬ ಸಮೇತ ಭೇಟಿ ನೀಡಿ ನಂಜುಂಡೇಶ್ವರನ ದರ್ಶನ ಪಡೆದ ಮಾಜಿ ಸಿಎಂ ಹೆಚ್.ಡಿಕೆ.

ಬೆಂಗಳೂರು,ಅಕ್ಟೋಬರ್,16,2023(www.justkannada.in):  ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಇಂದು ಕುಟುಂಬ ಸಮೇತ ಮೈಸೂರು ಜಿಲ್ಲೆ ನಂಜನಗೂಡಿಗೆ ಭೇಟಿ ನೀಡಿ  ನಂಜುಂಡೇಶ್ವರನ ದರ್ಶನ ಪಡೆದರು.

ಪತ್ನಿ ಅನಿತಾ ಕುಮಾರಸ್ವಾಮಿ ಅವರ ಜೊತೆ ನಂಜನಗೂಡು ದೇವಾಲಯಕ್ಕೆ ಭೇಟಿ ನೀಡಿದ ಹೆಚ್.ಡಿ ಕುಮಾರಸ್ವಾಮಿ ನಂಜುಂಡೇಶ್ವರನಿಗೆ ಹೆಚ್​ಡಿ ಕುಮಾರಸ್ವಾಮಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಂಜನಗೂಡಿನ ಬಳಿ ಚಾಮುಂಡಿಬೆಟ್ಟಕ್ಕೂ ಹೆಚ್.ಡಿಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯಲಿದ್ದಾರೆ.

Key words: Former CM- H.D Kumaraswamy- visited-Nanjangudu-spacial pooja