ನಾಳೆ ಕೊಹ್ಲಿ ದಾಖಲೆ ಮುರಿಯಲು ಹಿಟ್ ಮ್ಯಾನ್ ರೆಡಿ !

ನವದೆಹಲಿ, ನವೆಂಬರ್ 02, 2019 (www.justkannada.in): ರೋಹಿತ್ ಶರ್ಮಾ ಮತ್ತೊಂದು ದಾಖಲೆಯ ಸನಿಹದಲ್ಲಿದ್ದಾರೆ.

ನಾಯಕ ಕೊಹ್ಲಿ ನಿರ್ಮಿಸಿದ್ದ ಅದೇ ದಾಖಲೆಯನ್ನು ಮುರಿಯಲು ರೋಹಿತ್ ಗೆ ಕೇವಲ 8 ರನ್ ಗಳ ಅವಶ್ಯಕತೆ ಇದೆ. ನಾಳೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟಿ-20 ಪಂದ್ಯ ನಡೆಯಲಿದೆ.

ಈ ಪಂದ್ಯ ನಾಯಕ ರೋಹಿತ್ ಶರ್ಮಾ ಕೇವಲ 8 ರನ್​ ಗಳಿಸಿದರೆ, ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ರನ್ ಬಾರಿಸಿದ ಆಟಗಾರ ಅನ್ನೋ ಹಿರಿಮೆಗೆ ರೋಹಿತ್ ಶರ್ಮಾ ಪಾತ್ರವಾಗಲಿದ್ದಾರೆ.