ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಹರ್​ಮನ್​ಪ್ರೀತ್​ ಕೌರ್ ಹಿಡಿದ ಕ್ಯಾಚ್

ನವದೆಹಲಿ, ನವೆಂಬರ್ 02, 2019 (www.justkannada.in): ವೆಸ್ಟ್​ ಇಂಡೀಸ್​ ಹಾಗೂ ಭಾರತದ ಮಹಿಳಾ ಕ್ರಿಕೆಟ್​​ ತಂಡಗಳ ನಡುವೆ ಅಂಟಿಗೋವಾದಲ್ಲಿ ಮೊದಲ ಪಂದ್ಯದಲ್ಲಿ ಹರ್​ಮನ್​ಪ್ರೀತ್ ಕೌರ್​ ಹಿಡಿದ ಕ್ಯಾಚ್ ಎಲ್ಲರ ಗಮನ ಸೆಳೆದಿದೆ.

ಹರ್​ಮನ್​ಪ್ರೀತ್​ ಕೌರ್​ ​ಹಿಡಿದ ಕ್ಯಾಚ್​ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಬೌಂಡರಿ ಲೈನ್ ನತ್ತ ಹಾರುತ್ತಿದ್ದ ಚೆಂಡನ್ನು ಒಂದೇ ಕೈ ನಲ್ಲಿ ಹಿಡಿದ ಹರ್​ಮನ್​ಪ್ರೀತ್​ ಕೌರ್ ವೆಸ್ಟ್​ ಇಂಡೀಸ್​ನ ಸ್ಟೆಫನಿ ಟೆಲರ್ ಸೆಂಚುರಿ ಕನಸಿಗೆ ತಣ್ಣೀರು ಎರೆಚಿತ್ತು.