Saturday, September 26, 2026

BDA Apartments

ಐಸಿಸಿ ಮಹಿಳಾ ಟಿ 20 ವಿಶ್ವಕಪ್ ಟ್ರೋಫಿ ಅನಾವರಣ ಮಾಡಿದ ಕರೀನಾ BDA JK_Adv BDA Adv
Home Front Page ಐಸಿಸಿ ಮಹಿಳಾ ಟಿ 20 ವಿಶ್ವಕಪ್ ಟ್ರೋಫಿ ಅನಾವರಣ ಮಾಡಿದ ಕರೀನಾ

ಐಸಿಸಿ ಮಹಿಳಾ ಟಿ 20 ವಿಶ್ವಕಪ್ ಟ್ರೋಫಿ ಅನಾವರಣ ಮಾಡಿದ ಕರೀನಾ

ನವದೆಹಲಿ, ನವೆಂಬರ್ 02, 2019 (www.justkannada.in): ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಮೆಲ್ಬೋರ್ನ್ ನಲ್ಲಿ ಐಸಿಸಿ ಮಹಿಳಾ ಟಿ 20 ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸಿದ್ದಾರೆ.

ವಿಶ್ವ ಮಹಿಳಾ ಟಿ 20 ಫೆಬ್ರವರಿ 21, 2020 ರಂದು ಪ್ರಾರಂಭವಾಗಲಿದೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ಭಾರತ, ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ತಂಡಗಳೊಂದಿಗೆ ಎ ಗುಂಪಿನಲ್ಲಿ ಬಾಂಗ್ಲಾ ಸಹ ಸ್ಥಾನ ಗಿಟ್ಟಿಸಿದೆ.

ಫೆಬ್ರವರಿ 27 ರಂದು ನಡೆಯಲಿರುವ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಆಸ್ಟ್ರೇಲಿಯಾವನ್ನು ಎದುರಿಸಲಿದೆ. 12 ವರ್ಷದ ನಂತರ ಥೈಲ್ಯಾಂಡ್, ಪಂದ್ಯಾವಳಿಗೆ ಅರ್ಹತೆ ಪಡೆದಿದೆ. ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಮತ್ತು ಪಾಕಿಸ್ತಾನದೊಡನೆ ಗೆ ಬಿ ಗುಂಪಿನಲ್ಲಿ ಥೈಲ್ಯಾಂಡ್ ಸೇರ್ಪಡೆಯಾಗಿದೆ.