Friday, August 21, 2026

BDA Apartments

Home Front Page ಸಿಕ್ಸರ್ ಬಾರಿಸಿದ ಚೆಂಡು ಬಡಿದು ಗಾಯಗೊಂಡಿದ್ದ ಅಭಿಮಾನಿಗೆ ಉಡುಗೊರೆ ನೀಡಿದ ‘ಹಿಟ್ ಮ್ಯಾನ್’ !

ಸಿಕ್ಸರ್ ಬಾರಿಸಿದ ಚೆಂಡು ಬಡಿದು ಗಾಯಗೊಂಡಿದ್ದ ಅಭಿಮಾನಿಗೆ ಉಡುಗೊರೆ ನೀಡಿದ ‘ಹಿಟ್ ಮ್ಯಾನ್’ !

ಬರ್ಮಿಂಗ್‌ಹ್ಯಾಮ್, ಜುಲೈ 03, 2019 (www.justkannada.in):  ಬಾಂಗ್ಲಾದೇಶ ವಿರುದ್ಧ ಮಂಗಳವಾರ ನಡೆದ ವಿಶ್ವಕಪ್ ಪಂದ್ಯದ ವೇಳೆ ಆರಂಭಿಕ ಆಟಗಾರ ರೋಹಿತ್ ಶರ್ಮಾ ಸಿಡಿಸಿದ್ದ ಸಿಕ್ಸರ್‌ವೊಂದು ಬಡಿದು ಮಹಿಳಾ ಅಭಿಮಾನಿ ಗಾಯಗೊಂಡಿದ್ದರು.

ಪಂದ್ಯದ ಬಳಿಕ ಅವರನ್ನು ಖುದ್ದಾಗಿ ಭೇಟಿ ಮಾಡಿದ ರೋಹಿತ್ ಶರ್ಮಾ ತನ್ನ ಹಸ್ತಾಕ್ಷರವಿರುವ ಹ್ಯಾಟ್‌ನ್ನು ನೀಡಿದ್ದಾರೆ.

ವಿಶ್ವಕಪ್‌ನಲ್ಲಿ ನಾಲ್ಕನೇ ಶತಕ(104 ರನ್)ಸಿಡಿಸಿದ ಶರ್ಮಾ ಭಾರತ 9 ವಿಕೆಟ್‌ಗಳ ನಷ್ಟಕ್ಕೆ 314 ರನ್ ಗಳಿಸಲು ನೆರವಾಗಿದ್ದರು. ಬಾಂಗ್ಲಾದೇಶವನ್ನು 28 ರನ್‌ಗಳಿಂದ ಮಣಿಸಿದ ಭಾರತ ಸೆಮಿ ಫೈನಲ್‌ಗೆ ತಲುಪಿದೆ.