Tuesday, September 22, 2026

BDA Apartments

ರಸ್ತೆ ಅಪಘಾತ: ಪತ್ರಕರ್ತ ನೇಸರ ಕಾಡನಕುಪ್ಪೆ, ಪತ್ನಿ ಮಗುವಿಗೆ ಗಂಭೀರ ಗಾಯ BDA JK_Adv...
Home Crime ರಸ್ತೆ ಅಪಘಾತ: ಪತ್ರಕರ್ತ ನೇಸರ ಕಾಡನಕುಪ್ಪೆ, ಪತ್ನಿ ಮಗುವಿಗೆ ಗಂಭೀರ ಗಾಯ

ರಸ್ತೆ ಅಪಘಾತ: ಪತ್ರಕರ್ತ ನೇಸರ ಕಾಡನಕುಪ್ಪೆ, ಪತ್ನಿ ಮಗುವಿಗೆ ಗಂಭೀರ ಗಾಯ

ಮೈಸೂರು, ಜೂನ್ 21, 2019 (www.justkannada.in): ಪ್ರಜಾವಾಣಿ ಮೈಸೂರು ಬ್ಯೂರೊ ವರದಿಗಾರ ನೇಸರ ಕಾಡನಕುಪ್ಪೆ ಮತ್ತು ಕುಟುಂಬ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ‌.

ಅಪಘಾತದಲ್ಲಿ ನೇಸರ ಅವರ ಎಡಗಾಲು ಹಾಗೂ ಎದೆ ಭಾಗಕ್ಕೆ ಪೆಟ್ಟಾಗಿದ್ದು ಪತ್ನಿ ಮೇಘನಾ ಅವರಿಗೆ ತಲೆ, ಎಡಕಾಲು ಹಾಗೂ ಸೊಂಟಕ್ಕೆ ಬಲವಾದ ಪೆಟ್ಟಾಗಿದೆ. ಮಗುವಿನ ಎಡಕೈಗೆ ಪೆಟ್ಟಾಗಿದೆ.

ಈ ಮೂವರೂ ಮೈಸೂರಿನ ಅಪೊಲೊ ಆಸ್ಪತ್ರೆಗೆ ದಾಖಲಾಗಿಚಿಕಿತ್ಸೆ ಪಡಯುತ್ತಿದ್ದಾರೆ.
ಈಗಷ್ಟೇ ಚಿಕಿತ್ಸೆ ಪ್ರಾರಂಭವಾಗಿದ್ದು ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ.

ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.