Sunday, September 13, 2026

BDA Apartments

ಸಹಕಾರ ಕೃಷಿ ಕುರಿತು ಪರಿಶೀಲನೆ- ಸಿಎಂ ಸಿದ್ದರಾಮಯ್ಯ BDA JK_Adv BDA Adv
Home Front Page ಸಹಕಾರ ಕೃಷಿ ಕುರಿತು ಪರಿಶೀಲನೆ- ಸಿಎಂ ಸಿದ್ದರಾಮಯ್ಯ

ಸಹಕಾರ ಕೃಷಿ ಕುರಿತು ಪರಿಶೀಲನೆ- ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಜೂನ್ 13 ,2023(www.justkannada.in):  ಸಿಪಿಐ ಮುಖಂಡ ಸಾತಿ ಸುಂದರೇಶ್ ಅವರ ನೇತೃತ್ವದ ನಿಯೋಗವು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿತು.

ರಾಜ್ಯದಲ್ಲಿ ಸಹಕಾರಿ ಕೃಷಿಗೆ  ಪ್ರೋತ್ಸಾಹ ನೀಡುವ ಬಗ್ಗೆ ಅಧ್ಯಯನ ನಡೆಸಿ, ವರದಿ ಪಡೆಯಬಹುದಾಗಿದ್ದು, ಇದನ್ನು ಯಾವ ವಲಯಗಳಲ್ಲಿ ವಿಸ್ತರಿಸಬಹುದು ಎಂಬ ಆಯಾಮಗಳನ್ನೂ ಪರಿಶೀಲಿಸಬಹುದು ಎಂದು ಸಲಹೆ ನೀಡಿದರು.

ಸಹಕಾರ ಕೃಷಿ ಗೆ ಸಂಬಂಧಿಸಿದಂತೆ   ವಿಸ್ತೃತ ಪ್ರಸ್ತಾವನೆ ಸಲ್ಲಿಸುವಂತೆ  ಸಿಎಂ ಸಿದ್ಧರಾಮಯ್ಯ ತಿಳಿಸಿದರು. ಕಾರ್ಮಿಕರಿಗೆ ಬೆಲೆಯೇರಿಕೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಸೂಕ್ತವಾದ  ಕನಿಷ್ಠ ವೇತನ ನೀಡುವುದು, ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅವಕಾಶ ನೀಡಿರುವ ತಿದ್ದುಪಡಿ ಯನ್ನು ವಾಪಸ್ಸು ಪಡೆಯಲು ನಿಯೋಗ ಮನವಿ ಮಾಡಿತು. ಸಹಕಾರ ಕೃಷಿ ಕುರಿತು ಪರಿಶೀಲನೆ siddu

ನಿಯೋಗದಲ್ಲಿ ಸಿದ್ದನಗೌಡ ಪಾಟೀಲ್ , ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.

Key words: Review – Cooperative- Farming- CM Siddaramaiah.