Sunday, October 11, 2026

Dasara Wishes

BJP DasraWishes_JK DasraWishes JK
Happy Dasara
Home Front Page ನ.26 ರಂದು ಲೇಖಕ ಮೇರಿ ಜೋಸೆಫ್ ಅವರಿಗೆ “ರೆವೆರೆಂಡ್ ಕಿಟ್ಟಲ್” ಪ್ರಶಸ್ತಿ ಪ್ರದಾನ.

ನ.26 ರಂದು ಲೇಖಕ ಮೇರಿ ಜೋಸೆಫ್ ಅವರಿಗೆ “ರೆವೆರೆಂಡ್ ಕಿಟ್ಟಲ್” ಪ್ರಶಸ್ತಿ ಪ್ರದಾನ.

ಬೆಂಗಳೂರು, ನವೆಂಬರ್ 16 ,2022(www.justkannada.in): ಹೆಸರಾಂತ ಲೇಖಕ ಸಿ. ಮೇರಿ ಜೋಸೆಫ್ ಅವರಿಗೆ ನವಂಬರ್ 26 ರಂದು ಮಧ್ಯಾಹ್ನ 3.30 ಗಂಟೆಗೆ ನಗರದ ಕುಮಾರ ಕೃಪಾ ರಸ್ತೆಯ ಗಾಂಧಿ ಭವನದಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ “ರೆವೆರೆಂಡ್ ಕಿಟ್ಟಲ್” ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಬಿ.ವಿ. ಪಿಂಟೋ ಅವರು ಸಿ. ಮೇರಿ ಜೋಸೆಫ್ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.  ನ.26 ರಂದು ಲೇಖಕ ಮೇರಿ ಜೋಸೆಫ್ ಅವರಿಗೆ “ರೆವೆರೆಂಡ್ ಕಿಟ್ಟಲ್” ಪ್ರಶಸ್ತಿ ಪ್ರದ...

ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಭಾಸ್ಕರ್ ರಾವ್ ಅವರು ಈ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ರೆವೆರೆಂಡ್ ಫರ್ಡಿನೆಂಡ್ ಕಿಟ್ಟಲ್ ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.

Key words: Reverend Kittle-award – author -Mary Joseph – Nov. 26