ಸಂಜೆಯೊಳಗೆ ಮೀಸಲಾತಿ ಘೋಷಿದರೇ ಮಾತ್ರ ಪಾದಯಾತ್ರೆ ವಾಪಸ್- ಬಸವ ಜಯಮೃತ್ಯುಂಜಯ ಸ್ವಾಮೀಜಿ…

ಬಾಗಲಕೋಟೆ,ಜನವರಿ,13,2021(www.justkannada.in):  ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2 ಎ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ನಾಳೆ (ಜನವರಿ 14) ನಡೆಯಲಿರುವ ಪಾದಯಾತ್ರೆ ರದ್ದಾಗಿಲ್ಲ. ಇಂದು ಸಂಜೆಯೊಳಗೆ ಮೀಸಲಾತಿ ಘೋಷಿಸಿದರೇ ಮಾತ್ರ ಪಾದಯಾತ್ರೆ ವಾಪಸ್ ತೆಗೆದುಕೊಳ್ಳಲಾಗುತ್ತದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.jk-logo-justkannada-mysore

ಶಾಸಕ ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ  ಖಚಿತವಾಗುತ್ತಿದ್ದಂತೆ, ಪಂಚಮಸಾಲಿ ಪೀಠದಿಂದ ನಡೆಯುವ ಪಾದಯಾತ್ರೆ ರದ್ಧಾಗಿದೆ ಎಂಬ ಸುದ್ದಿ ಹರಡಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ  ಬಸವ ಜಯಮೃತ್ಯುಂಜಯ ಸ್ವಾಮೀಜಿ, ಕೂಡಲಸಂಗಮದಿಂದ ಬೆಂಗಳೂರಿಗೆ ಬೃಹತ್‌ ಪಾದಯಾತ್ರೆ ನಡೆಯಲಿದೆ. ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲಿಸೋದಿಲ್ಲ. ಮುಂದೆ ಇಟ್ಟ ಹೆಜ್ಜೆಯನ್ನ ಹಿಂದಿಡುವ ಮಾತೇ ಇಲ್ಲ ಎಂದರು.reservation-panchamasali-padayatre-basava-jayamritunjaya-swamiji

ಹಾಗೆಯೇ  ಸರ್ಕಾರಕ್ಕೆ ಕೊನೆಯ ಎಚ್ಚರಿಕೆ ನೀಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಸಂಜೆಯೊಳಗೆ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಘೋಷಿಸಿ. ಇಲ್ಲದಿದ್ದರೇ ನಾಳೆ ಪಾದಯಾತ್ರೆ ನಡೆಯಲಿದ್ದು 2 ಲಕ್ಷ ಜನ ಸೇರಲಿದ್ದಾರೆ ಎಂದು ಹೇಳಿದರು.

Key words:  reservation –panchamasali-padayatre- Basava Jayamritunjaya Swamiji.