ಕೊಟ್ಟ ಮಾತು ಉಳಿಸಿಕೊಳ್ಳದ ನಿಮ್ಮನ್ನ ಸಿದ್ದಲಿಂಗೇಶ್ವರನೂ ಕ್ಷಮಿಸುವುದಿಲ್ಲ-ಸಿಎಂ ಬಿಎಸ್ ವೈ ವಿರುದ್ಧ ಹೆಚ್.ವಿಶ್ವನಾಥ್ ವಾಗ್ದಾಳಿ…

ಮೈಸೂರು,ಜನವರಿ,13,2021(www.justkannada.in):  ಸಚಿವ ಸಂಪುಟ ವಿಸ್ತರಣೆ ಬಹುತೇಕ ಫೈನಲ್ ಆಗಿದ್ದು, 7 ಮಂದಿ ಮಂತ್ರಿಯಾಗುವುದು ಖಚಿತವಾಗಿದೆ. ಸಚಿವರಾಗುವವರ ಹೆಸರು ಫೈನಲ್ ಆಗುತ್ತಿದ್ದಂತೆ ಇತ್ತ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ  ಬಿಜೆಪಿ ಎಂಎಲ್ ಸಿ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.jk-logo-justkannada-mysore

ಯಡಿಯೂರಪ್ಪ ತಮ್ಮ ನಾಲಿಗೆ ಕಳೆದುಕೊಂಡಿದ್ದಾರೆ. ತಾವು ಕೊಟ್ಟಿದ್ದ ಮಾತು ಕಳೆದುಕೊಂಡಿದ್ದಾರೆ. ಯಡ್ಯೂರಪ್ಪನವರೇ ಸಿದ್ದಲಿಂಗೇಶ್ವರನು ನಿಮಗೆ ಒಳ್ಳೆದು ಮಾಡೋಲ್ಲ. ಕೊಟ್ಟ ಮಾತು ಉಳಿಕೊಳ್ಳದ ನಿಮ್ಮನ್ನ ಸಿದ್ಧಲಿಂಗೇಶ್ವರನು ಕ್ಷಮಿಸೋಲ್ಲ ಎಂದು ಹಳ್ಳಿಹಕ್ಕಿ ಹೆಚ್.ವಿಶ್ವನಾಥ್ ಗುಡುಗಿದ್ದಾರೆ.

ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ವಿಶ್ವನಾಥ್, ರಾಜ್ಯದಲ್ಲಿ ಯಾವ ನಾಯಕನಿಗೂ ಕೃತಜ್ಞತೆ ಇಲ್ಲ. ಆ ಸಿದ್ದರಾಮಯ್ಯ ಕರೆದುಕೊಂಡು  ಬಂದವು ಅವರು ಹೇಳಲಿಲ್ಲ. ಯಡಿಯೂರಪ್ಪ ಗೆ ತ್ಯಾಗ ಮಾಡಿದವು. ಅವರು ಹೇಳಲಿಲ್ಲ. ಯಡಿಯೂರಪ್ಪ ತಮ್ಮ ನಾಲಿಗೆ ಕಳೆದುಕೊಂಡಿದ್ದಾರೆ. ತಾವು ಕೊಟ್ಟಿದ್ದ ಮಾತು ಕಳೆದುಕೊಂಡಿದ್ದಾರೆ. ಯಡಿಯೂರಪ್ಪ ನೆನಪು ಮಾಡಿಕೊಳ್ಳಬೇಕು ಯಾರಿಂದ ಸರ್ಕಾರ ಬಂತು ಅಂತ. 17 ಜನರ ಭಿಕ್ಷೆಯಲ್ಲಿ ಸರ್ಕಾರ ಇದೆ. ಅವರ ತ್ಯಾಗದಿಂದ ಸರ್ಕಾರ ಬಂದಿದ ಅದನ್ನ ನೆನಪು ಮಾಡಿಕೊಳ್ಳಿ ಎಂದು ಕಿಡಿಕಾರಿದರು.

ನೀವು ಎಂತ ಸರ್ಕಾರ ಮಾಡಿದ್ದೀರಿ ಯಡಿಯೂರಪ್ಪನವರೇ…? 33 ರಲ್ಲೂ 13 ವೀರಶೈವ, 11 ಜನ ಒಕ್ಕಲಿಗ, 4 ಜನ ಕುರುಬರಿಗೆ ಮಂತ್ರಿ ಕೊಟ್ಟಿದ್ದೀರಾ…? ಇದೇನಾ ನಿಮ್ಮ‌ ಸಾಮಾಜಿಕ ನ್ಯಾಯ..? ನಾಗೇಶ್‌ ರನ್ನ ಯಾಕೇ ತೆಗಿಬೇಕು…? ಎಂದು ಪ್ರಶ್ನಿಸಿದ ಹೆಚ್.ವಿಶ್ವನಾಥ್, ಯಡಿಯೂರಪ್ಪನವರೇ ನಿಮ್ಮಿಂದ ಏನಾದ್ರು ನಿರೀಕ್ಷೆ ಮಾಡಿದ್ನಾ ನಾನು. ಸ್ನೇಹದಲ್ಲಿ‌ ಇದ್ದುದ್ದಕ್ಕೆ ನಿಮಗೆ ಸಹಾಯ ಮಾಡಿದವು. ಆದರೇ ನೀವೆನು ಮಾಡಿದ್ರಿ ಹೇಳಿ. ನೀವು ಏನು ಮಾತು ಕೊಟ್ಟಿದ್ರಿ ಅಂತ ಹೇಳಿ. ಬನ್ನಿ ಬೇಕಿದ್ರೆ ಯಡಿಯೂರಿಗೆ ಹೋಗೋಣ ಏನಾಯ್ತು ಅಂತ ಅಲ್ಲೆ ಮಾತನಾಡೋಣ ಎಂದು ತಿಳಿಸಿದರು.MLC-H.Vishwanath- outrage- Against-CM BS yeddyurappa

ನಾವು ಯಡಿಯೂರಪ್ಪರಿಂದ ಇದನ್ನ ನಿರೀಕ್ಷೆ ಮಾಡಿರಲಿಲ್ಲ. ನಿಮ್ಮನ್ನ ಸಿಎಂ ಮಾಡಿದ್ದೆ ಈ 17 ಜನ. ನಿಮ್ಮ ಸಂಪುಟದಲ್ಲಿ ಎಲ್ಲರು ಇರಬೇಕು. ಮುಸ್ಲಿಂ ಕೂಡ ಇರಬೇಕು‌ ಎಲ್ಲ ಜಾತಿ ಜನಾಂಗ ಇರಬೇಕು. ಆದ್ರೆ ಇಲ್ಲೆನಾಗಿದೆ. ನಾಡಿನಲ್ಲಿ ನಾಲಿಗೆಗೆ ತಪ್ಪದ ನಾಯಕ ಅಂತ ಬಿರುದು ಕೊಟ್ಟಿದ್ದು ನಾವೇ ಆದ್ರೆ ಅದೇಲ್ಲ ಏನಾಯ್ತು ಎಂದು ಹೆಚ್.ವಿಶ್ವನಾಥ್ ಕಿಡಿಕಾರಿದರು.

English summary…..

“You have failed to fulfil your promise – god won’t forgive you’ – H.Vishwanath on CM BSY
Mysuru, Jan. 13, 2021 (www.justkannada.in): BJP MLC H. Vishwanath today accused Chief Minister B.S. Yedyurappa of failing in fulfilling his promise. “Yedyurappa has lost his tongue. He has failed in keeping up his promise. God won’t forgive him,” he said."You have failed to fulfil your promise - god won't forgive you' - H.Vishwanath on CM BSY Mysuru, Jan. 13, 2021 (www.justkannada.in): BJP MLC H. Vishwanath today accused Chief Minister B.S. Yedyurappa of failing in fulfilling his promise. "Yedyurappa has lost his tongue. He has failed in keeping up his promise. God won't forgive him," he said. Following the announcement of cabinet expansion the list of new ministers is almost finalised, Vishwanath addressed a press meet held in Mysuru today. "None of the leaders has gratitude today. We all sacrificed for Yedyurappa, but he has failed in keeping up his promise. He should remember how he could form the government. His government today is in power because of the 17 supporters and because of their sacrifices," he said.. Keywords: H. Vishwanath/ CM BSY/ Yedyurappa failed in keeping up his promise
Following the announcement of cabinet expansion the list of new ministers is almost finalised, Vishwanath addressed a press meet held in Mysuru today. “None of the leaders has gratitude today. We all sacrificed for Yedyurappa, but he has failed in keeping up his promise. He should remember how he could form the government. His government today is in power because of the 17 supporters and because of their sacrifices,” he said..
Keywords: H. Vishwanath/ CM BSY/ Yedyurappa failed in keeping up his promise

Key words: MLC-H.Vishwanath- outrage- Against-CM BS yeddyurappa