“ಅಂಗನವಾಡಿ ಕೇಂದ್ರಗಳ ತೆರೆಯುವ ಸಂಬಂಧ ಕ್ರಮಕೈಗೊಳ್ಳಿ” : ಸುಪ್ರೀಂ ಸೂಚನೆ

ಬೆಂಗಳೂರು,ಜನವರಿ,13,2021(www.justkannada.in) : ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ತೆರೆಯುವ ಸಂಬಂಧ ಜನವರಿ 31ರ ಹೊತ್ತಿಗೆ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.jk-logo-justkannada-mysore

ಕೋವಿಡ್-19 ಹಿನ್ನೆಲೆಯಲ್ಲಿ ಸೂಕ್ಷ್ಮ ವಲಯಗಳನ್ನು ಹೊರತುಪಡಿಸಿ ದೇಶದ ಇತರ ಭಾಗಗಳಲ್ಲಿ ಅಂಗನವಾಡಿ ಆರಂಭಿಸುವ ಸಂಬಂಧ ಕ್ರಮಕೈಗೊಳ್ಳಿ ಎಂದು ಸೂಚಿಸಿದೆ.

ಕಳೆದ ಮಾರ್ಚ್ ತಿಂಗಳಲ್ಲಿ ಸ್ಥಗಿತಗೊಂಡ ಅಂಗನವಾಡಿಗಳ ಕಾರ್ಯನಿರ್ವಹಣೆ ಇನ್ನೂ ಆರಂಭಗೊಂಡಿಲ್ಲ. 6 ವರ್ಷದ ಮಗುವಿನ ಸರ್ವತೋಮುಖ ಬೆಳವಣಿಗೆಗಾಗಿ ಇರುವ ಅಂಗನವಾಡಿ ಕೇಂದ್ರಗಳನ್ನು ಮತ್ತೆ ಆರಂಭಿಸಿ ಮಕ್ಕಳನ್ನು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅಗತ್ಯ ಎಂದು ಹೇಳಲಾಗಿದೆ.Anganwadi-centers-Opening-Relation-Take-action-Supreme -NOTEಇದೇ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರಗಳ ಮೂಲಕ ಗರ್ಭಿಣಿಯರಿಗೆ, ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿರುವ ತಾಯಿ-ಮಗುವಿಗೆ ಪೂರಕ ಆಹಾರ ಒದಗಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.

ENGLISH SUMMARY….

SC orders government to take measures to open Anganwadi centres
Bengaluru, Jan. 13, 2021 (www.justkannada.in): The Hon’ble Supreme Court of India has directed the Government to arrive at a suitable decision on taking measures to open Anganwadi centers in State and Union Territories by January 31.
The SC has directed the government, to take measures to open the Anganwadi centers in other parts excepting places that are COVID-19 sensitive.Anganwadi-centers-Opening-Relation-Take-action-Supreme -NOTE
The Anganwadi centers that were closed in March due to the lockdown have not opened yet. It is important to open the centers soon, keeping in mind the overall development of children below six years of age and engage them in regular activities. The SC has also instructed to provide nutrition to pregnant women and children who are suffering from malnourishment.
Keywords: Supreme Court directions to open Anganwadi Centres/ Govt. to take measures by January 31.

key words : Anganwadi-centers-Opening-Relation-Take-action-SupremeNOTE