ಕೆರಿಯರ್ ಹಬ್ ನಿಂದ 1500 ಉದ್ಯೋಗ ಸಿಗುವ ಭರವಸೆ: ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ಜನವರಿ,26,2022(www.justkannada.in):  ‘ರಾಷ್ಟ್ರೀಯ ಶಿಕ್ಷಣ ನೀತಿ-2020″ ಅನ್ನು ವಿಶ್ವವಿದ್ಯಾನಿಲಯದಲ್ಲಿ ಸಕ್ರಿಯವಾಗಿ – ಜಾರಿಗೊಳಿಸಲಾಗಿದೆ. ಅಲ್ಲದೆ ಕೆರಿಯರ್ ಹಬ್ ತನ್ನ ಕಾರ್ಯವೈಖರಿಯನ್ನು ಪ್ರಾರಂಭಿಸಿದ್ದು, ಇದರಿಂದ 1500 ವಿದ್ಯಾರ್ಥಿಗಳಿಗೆ ನೌಕರಿ ಸಿಗುವ ಭರವಸೆ ಇದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ‌ಕುಮಾರ್ ತಿಳಿಸಿದರು.

73ನೇ ಗಣರಾಜ್ಯೋತ್ಸವದ ಅಂಗವಾಗಿ ನಗರದ ಕ್ರಾಫರ್ಡ್ ಹಾಲ್ ಮುಂಭಾಗ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಹಲವು ತಿದ್ದುಪಡಿಗಳ ನಂತರ 1950ರ ಜನವರಿ 26ರಂದು ಪೂರ್ಣ ಪ್ರಮಾಣದಲ್ಲಿ ಸಂವಿಧಾನ ಅಂಗೀಕೃತವಾಯಿತು. ಹಾಗಾಗಿ ಸಂವಿಧಾನ – ಕಾರ್ಯೋನ್ಮುಖವಾದ ಸಂದರ್ಭವನ್ನು ನಾವು ಗಣರಾಜ್ಯ ದಿನವೆಂದು ಆಚರಿಸುತ್ತಾ ಬಂದಿದ್ದೇವೆ. ಸಂವಿಧಾನ ಶಿಲ್ಪಿ ಎಂದೇ ಖ್ಯಾತರಾದ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಅಪಾರವಾದುದು. ಹಾಗಾಗಿ ಅವರಿಗೆ ನಮ್ಮ ಕೃತಜ್ಞತೆಯನ್ನು ಸಮರ್ಪಿಸಬೇಕಾದುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.

ಭಾರತದ ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯ ಎಂದು ಸಂವಿಧಾನವು ಘೋಷಿಸುತ್ತದೆ. ಈ ಗಣರಾಜ್ಯ ದಿನದಂದು, ನಾವು ಶ್ರೀಮಂತರಾಗಿರಲಿ ಅಥವಾ ಬಡವರಾಗಿರಲಿ, ಪ್ರಬಲ ರಾಜಕಾರಣಿಯಾಗಿರಲಿ, ಅಥವಾ ನಾಗರಿಕರಾಗಿರಲಿ, ನಮ್ಮ ಅದ್ಭುತ ಸಂವಿಧಾನವು ನಮಗೆ ನೀಡಿದ್ದು, ಈ ಮೂಲಭೂತ ತತ್ವಗಳು ಮತ್ತು ಮೌಲ್ಯಗಳನ್ನು ಎಲ್ಲರೂ ಗೌರವಿಸಬೇಕಿದೆ ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ ನಮ್ಮ ವಿಶ್ವವಿದ್ಯಾನಿಲಯದ ಎನ್‌ಎಸ್‌ಎಸ್ ಘಟಕಕ್ಕೆ ಹಾಗೂ ವಿದ್ಯಾರ್ಥಿನಿಯರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಹಾಸನದ ಎವಿಕೆ ಕಾಲೇಜಿನ ತನುಶ್ರೀ ಹಾಗೂ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಸುಷ್ಮಿತಾ ಅವರು ದೆಹಲಿಯಲ್ಲಿ ನಡೆಯುತ್ತಿರುವ ಪಥಸಂಚಲನದಲ್ಲಿ ಭಾಗವಹಿಸುತ್ತಿದ್ದಾರೆ. ಇವರ ಭಾಗವಹಿಸುವಿಕೆಯಿಂದ ಮೈಸೂರು ವಿಶ್ವವಿದ್ಯಾನಿಲಯದ ಹೆಸರು ಪ್ರಜ್ವಲಿಸುತ್ತದೆ. ಎನ್ಎಸ್ಎಸ್ ಘಟನವು ಹೀಗೆ ಉತ್ತಮವಾದ ಕೆಲಸಕಾರ್ಯಗಳನ್ನು ಕೈಗೊಂಡು ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಶ್ರಮಿಸಲಿ ಎಂದು ಹಾರೈಸಿದರು.

ಇಂದು ನಮ್ಮ ದೇಶವು ಪ್ರಗತಿಪರದತ್ತ ಸಾಗುತ್ತಾ ಡಿಜಿಟಲೀಕರಣಗೊಂಡು ಡಿಜಿಟಲ್ ಇಂಡಿಯಾ ಆಗಿದೆ. ಹಾಗೆಯೇ ನಮ್ಮ ಮೈಸೂರು ವಿಶ್ವವಿದ್ಯಾನಿಲಯದಲ್ಲಿಯೂ ಸಹ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಡಿಜಿಟಲೀಕರಣಗೊಳಿಸುವತ್ತ ಸಾಗಿದೆ. ಯಾವುದೇ ವಿಶ್ವವಿದ್ಯಾನಿಲಯವಾಗಲಿ ಅಥವಾ ಶಿಕ್ಷಣ ಸಂಸ್ಥೆಯಾಗಲಿ ಶ್ರೇಷ್ಠತೆ ಪಡೆಯಬೇಕಾದರೆ ಅಲ್ಲಿನ ಅಧ್ಯಾಪಕರು, ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಎಲ್ಲಾ ಉದ್ಯೋಗಿಗಳು, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕಾಗಿದೆ. ತನ್ನ ಬೋಧಕವರ್ಗದ ಸಾಮರ್ಥ್ಯದಷ್ಟೇ ದೃಢವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನೆ ನಿರಂತರವಾಗಿ ಸಾಗಬೇಕಾಗುತ್ತದೆ ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರರು ಅಳವಡಿಸಿಕೊಂಡಿದ್ದಂತಹ ಮೌಲ್ಯಗಳನ್ನು ಉಳಿಸಿಕೊಂಡು, ನಮ್ಮ ಯುವ ಪೀಳಿಗೆಯು, ಈ ಪ್ರಮುಖ ಮೌಲ್ಯಗಳನ್ನು ಪಾಲಿಸಿದ್ದೇ ಆದರೆ ನಮ್ಮ ಅಭಿವೃದ್ಧಿಯ ಹಾದಿಯನ್ನು ಬೆಳಗಿಸಬಹುದಾಗಿದೆ ಎಂದರು.

ಇದೇ ವೇಳೆ ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ರಾಷ್ಟ್ರಗೀತೆ, ನಾಡಗೀತೆ, ರೈತ ಗೀತೆ ಹಾಗೂ ದೇಶಭಕ್ತಿ ಗೀತೆಯನ್ನು ಹಾಡಿದರು. ಪ್ರೊ.ಆರ್.ಶಿವಪ್ಪ, ಪ್ರೊ.ಎ.ಪಿ.ಜ್ಞಾನಪ್ರಕಾಶ್ ಸೇರಿದಂತೆ ಇತರರು ಹಾಜರಿದ್ದರು.

Key words: republic day- mysore university-VC

ENGLISH SUMMARY…

Job opportunities for 1500 candidates through career hub: UoM VC Prof. G. Hemanth Kumar
Mysuru, January 26, 2022 (www.justkannada.in): ‘The University of Mysore has implemented the National Education Policy – 2020 actively. The career hub has stared functioning, it is expected to provide jobs for 1,500 students,” opined Prof. G. Hemanth Kumar, Vice-Chancellor, University of Mysore.
He hoisted the national flag in front of the Crawford Hall on the occasion of the 73rd Republic Day celebrations. In his address, he said, “our constitution was implemented on January 26, 1950 after incorporating several amendments. We celebrate the Republic day in commemoration of the implementation of the constitution. The contribution of the architect of Indian constitution Dr B.R. Ambedkar is immense. It is the duty of all of us to express our gratitude to him,” he added.
Keywords: University of Mysore/ Prof. G. Hemanth Kumar/ 73rd Republic Day