ರೇಪೋ ದರದಲ್ಲಿ ಯಾವುದೇ ಬದಲಾವಣೆ ಇಲ್ಲ-RBI ಗವರ್ನರ್ ಶಕ್ತಿಕಾಂತ್ ದಾಸ್.

ನವದೆಹಲಿ,ಏಪ್ರಿಲ್,4,2024 (www.justkannada.in):  ರೇಪೋ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಘೋಷಿಸಿದ್ದಾರೆ.

ಸತತ ಏಳನೇ ಬಾರಿಗೆ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಇರಲು ಆರ್ ಬಿಐ ನಿರ್ಧರಿಸಿದೆ. ಕಳೆದ ಒಂದು ವರ್ಷದಿಂದ ಬಡ್ಡಿದರ ಶೇ. 6.5ರಷ್ಟಿದ್ದು  ಈ ದರವೇ ಮುಂದುವರಿಯಲಿದೆ. ಹಾಗೆಯೇ ಗೃಹ ಸಾಲ ಬಡ್ಡಿದರದಲ್ಲೂ ಯಾವುದೇ ಬದಲಾವಣೆ ಇಲ್ಲ ಎಂದು ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

ಎಂಪಿಸಿ ಸಭೆಯಲ್ಲಿ ಗವರ್ನರ್ ಶಕ್ತಿಕಾಂತ್ ದಾಸ್ ಅವರನ್ನೂ ಸೇರಿ ಭಾಗವಹಿಸಿದ್ದ 6 ಮಂದಿ ಪೈಕಿ ಐವರು ರೆಪೋ ದರ ಯಥಾಸ್ಥಿತಿ ಮುಂದುವರಿಸಲು ಒಲವು ತೋರಿದ್ದಾರೆ ಎನ್ನಲಾಗಿದೆ . 5:1 ಮತಗಳು ಈ ನಿರ್ಧಾರದ ಪರವಾಗಿ ಬಂದಿದೆ. ಇದರೊಂದಿಗೆ ಕಳೆದ ಒಂದು ವರ್ಷದಿಂದ ಇರುವ ಶೇ. 6.5ರ ಬಡ್ಡಿದರವೇ ಮುಂದುವರಿಯಲಿದೆ.

Key words:  repo rate, RBI, Shaktikanta Das.