ಬೆಂಗಳೂರು,ಆಗಸ್ಟ್,10,2026 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 14ನೇ ಸಾಕ್ಷಿಯ ಪಾಟೀ ಸವಾಲಿಗೆ ಆರೋಪಿಗಳಿಗೆ ಬೆಂಗಳೂರಿನ 59ನೇ ಸೆಷನ್ಸ್ ನ್ಯಾಯಾಲಯ ಅನುಮತಿ ನೀಡಿದೆ.
ಮಾಫಿಸಾಕ್ಷಿಯಾಗಿ ಪರಿಗಣಿಸುವಂತೆ ಕೋರಿ ಪ್ರಕರಣ 14ನೇ ಆರೋಪಿ ಪ್ರದೋಷ್ 59ನೇ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಈ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ 14ನೇ ಸಾಕ್ಷಿಯ ಪಾಟೀ ಸವಾಲಿಗೆ ಆರೋಪಿಗಳಿಗೆ ಅನುಮತಿ ನೀಡಿದೆ. ಮಧ್ಯಾಹ್ನ 3 ಗಂಟೆಗೆ ನ್ಯಾಯಾಲಯ ಆದೇಶ ನೀಡಲಿದ್ದುಇದೀಗ ಸಾಕ್ಷಿಯ ಪಾಟೀಸವಾಲು ಮುಂದುವರಿಕೆಯಾಗಲಿದೆ.
ಮಾಫಿಸಾಕ್ಷಿಯಾಗುವುದಾಗಿ 14ನೇ ಆರೋಪಿ ಪ್ರದೋಷ್ ಸಲ್ಲಿಸಿರುವ ಅರ್ಜಿಗೆ ಅಕ್ಷೇಪಣೆ ಸಲ್ಲಿಸಲು ಆರೋಪಿ ನಟ ದರ್ಶನ್ ಪರ ವಕೀಲರು ಅವಕಾಶ ಕೋರಿದ್ದಾರೆ. ದರ್ಶನ್ ಸೇರಿ 6 ಆರೋಪಿಗಳೂ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಯಲ್ಲಿ ಹಾಜರಾಗಿದ್ದಾರೆ.
Key words: Renukaswamy, murder case, Darshan, Court, Patiswalu,







