Friday, August 28, 2026

BDA Apartments

Home Crime ರೇಣುಕಾಸ್ವಾಮಿ ಕೊಲೆ ಕೇಸ್: ಸಾಕ್ಷಿ ನೀಡುವಂತೆ ಎ14 ಪ್ರದೋಷ್ ಗೆ ಸಮನ್ಸ್ ಜಾರಿ ಮಾಡಿದ ಕೋರ್ಟ್

ರೇಣುಕಾಸ್ವಾಮಿ ಕೊಲೆ ಕೇಸ್: ಸಾಕ್ಷಿ ನೀಡುವಂತೆ ಎ14 ಪ್ರದೋಷ್ ಗೆ ಸಮನ್ಸ್ ಜಾರಿ ಮಾಡಿದ ಕೋರ್ಟ್

ಬೆಂಗಳೂರು,ಆಗಸ್ಟ್,28,2026 (www.justkannada.in):  ನಟ ದರ್ಶನ್ ಅಂಡ್ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ನೀಡುವಂತೆ 14ನೇ ಆರೋಪಿ  ಪ್ರದೋಷ್ ಗೆ  ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿದೆ.

ವಿಚಾರಣೆ ವೇಳೆ ವಿಶೇಷ ಸಾರ್ವಜನಿಕ ಅಭಿಯೋಜಕ (ಎಸ್‌ಪಿಪಿ) ಪ್ರಸನ್ನ ಕುಮಾರ್ ಅವರು, ಪ್ರಕರಣದ ಪ್ರಮುಖ ಸಾಕ್ಷ್ಯಗಳ ಹಿನ್ನೆಲೆಯಲ್ಲಿ ಪ್ರದೋಷ್‌ ಗೆ ‘ವಿಟ್ನೆಸ್ ಸಮನ್ಸ್’ ನೀಡುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು.

ಎಸ್‌ಪಿಪಿ ಅವರ ವಾದ ಮತ್ತು ಮನವಿಯನ್ನು ಪುರಸ್ಕರಿಸಿದ 59ನೇ ಸಿಸಿಹೆಚ್ ಕೋರ್ಟ್ ಜಡ್ಜ್ ಸುಜಾತ ಮಡಿವಾಳಪ್ಪ ಸಾಂಬ್ರಾಣಿ ಅವರು, ಸೆಪ್ಟೆಂಬರ್ 2 ರಂದು ಸಾಕ್ಷಿ ನೀಡಲು ಹಾಜರಾಗುವಂತೆ ಪ್ರದೋಷ್‌ ಗೆ ಸೂಚನೆ ನೀಡಿ ಸಮನ್ಸ್  ನೀಡಿದ್ದಾರೆ.

ಪ್ರದೋಷ್ ಗೆ ಸಮನ್ಸ್ ಜಾರಿಗೊಳಿಸಲು ಜೈಲು ಅಧಿಕಾರಿಗಳಿಗೆ ಜಡ್ಜ್ ಸುಜಾತ ಮಡಿವಾಳಪ್ಪ ಸಾಂಬ್ರಾಣಿ ಅವರು  ಸೂಚನೆ ನೀಡಿದ್ದಾರೆ.

Key words: Renukaswamy, murder case, Actor Darshan, Court, summons, Pradosh