Saturday, October 17, 2026

Dasara Wishes

Happy Dasara
Home Front Page ನಿಮ್ಮ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ನಾನು ಬೇಕಾಗಿದ್ದೀನಾ? ಹೆಚ್ ಡಿಕೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ...

ನಿಮ್ಮ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ನಾನು ಬೇಕಾಗಿದ್ದೀನಾ? ಹೆಚ್ ಡಿಕೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್

ಬೆಂಗಳೂರು,ಆಗಸ್ಟ್,28,2026 (www.justkannada.in): ತಮ್ಮ ವಿರುದ್ದ ಭ್ರಷ್ಟಾಚಾರ ಆರೋಪ ಮಾಡಿ ರಾಜೀನಾಮೆಗೆ ಆಗ್ರಹಿಸಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ನಿಮ್ಮ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ನಾನು ಬೇಕಾಗಿದ್ದೀನಾ? ಇಷ್ಟು ದಿನ ಬಿಜೆಪಿಗೆ ಬೇಕಿತ್ತು. ಈಗ ಜೆಡಿಎಸ್ ಗೂ ನಾನು ಬೇಕಾಗಿದೆ.  ನನ್ನಿಂದ ನಿಮ್ಮ ರಾಜಕೀಯ ಅಸ್ತಿತ್ವ ಉಳಿದರೆ ಮಾತಾಡಲಿ. ನನ್ನಿಂದ ಅವರ ರಾಜಕೀಯ ಅಸ್ತಿತ್ವ ಉಳಿಯುತ್ತದೆ ಎಂದಾದರೆ ಅವರು ನನ್ನ ಬಗ್ಗೆ ಏನು ಬೇಕಾದರೂ ಮಾತನಾಡಿಕೊಳ್ಳಲಿ ಎಂದು ಟಾಂಗ್ ಕೊಟ್ಟರು.ಸಿಜೆಪಿಗೆ ಫಂಡ್‌ ಮಾಡುತ್ತಿರುವುದು ಕಾಂಗ್ರೆಸ್:‌ ರಜ್ಯದ ಹಣ ಲೂಟಿ ಮಾಡಿ ದೆಹಲಿಗೆ ಸಾಗಾಟ-ಕೇಂದ್ರ ಸಚಿವ ಹೆಚ್‌ ಡಿಕೆ

ಆರ್ ಎಸ್ ಎಸ್ ವಿಷಸರ್ಪ ಎಂದು ದೊಡ್ಡ ಆರ್ಟಿಕಲ್ ಬರೆದಿದ್ದರು.  ಆರ್ ಎಸ್ ಎಸ್ ಬಗ್ಗೆ ಆರ್ಟಿಕಲ್ ಬರದಿದ್ದು ಮರೆತು ಹೋಗಿಬಿಟ್ಟರಾ?  ಆರ್ ಎಸ್ ಎಸ್ ಬಗ್ಗೆ ತಿಳಿದಿದ್ದಾರೆ ಎಂದು ನಾನು ಅಭಿಮಾನಿಯಾಗಿದ್ದೆ.  ಅಧಿಕಾರಕ್ಕಾಗಿ ಸಿದ್ದಾಂತ ಬಿಟ್ಟು ಹೋಗುವವರ ಬಗ್ಗೆ ನಾನೇನು ಹೇಳಲಿ ಜೆಡಿಎಸ್ ಬಿಜೆಪಿಯಿಂದ ನಾನು ಕಲಿಯುವುದು ಏನು ಇಲ್ಲ. ಎಂದು  ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕುಟುಕಿದರು.ನಿಮ್ಮ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ನಾನು ಬೇಕಾಗಿದ್ದೀನಾ? ಹೆಚ್ ಡಿಕೆಗೆ ...

Key words: Home Minister, Priyank Kharge, Central Minister, HDK