Friday, September 25, 2026

BDA Apartments

ಮಾಫಿ ಸಾಕ್ಷಿ ಅರ್ಜಿ: ದರ್ಶನ್ ಸೇರಿ ಆರೋಪಿಗಳ ವಾದ ಆಲಿಸಬೇಕಿಲ್ಲ- ಕೋರ್ಟ್ BDA JK_Adv...
Home Cinema ಮಾಫಿ ಸಾಕ್ಷಿ ಅರ್ಜಿ: ದರ್ಶನ್ ಸೇರಿ ಆರೋಪಿಗಳ ವಾದ ಆಲಿಸಬೇಕಿಲ್ಲ- ಕೋರ್ಟ್

ಮಾಫಿ ಸಾಕ್ಷಿ ಅರ್ಜಿ: ದರ್ಶನ್ ಸೇರಿ ಆರೋಪಿಗಳ ವಾದ ಆಲಿಸಬೇಕಿಲ್ಲ- ಕೋರ್ಟ್

ಬೆಂಗಳೂರು,ಆಗಸ್ಟ್,10,2026 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಗೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿ ಇತರೆ ಆರೋಪಿಗಳಿಗೆ  ಬೆಂಗಳೂರಿನ 59ನೇ ಸೆಷನ್ಸ್ ನ್ಯಾಯಾಲಯ ಶಾಕ್ ನೀಡಿದೆ.

ಪ್ರಕರಣದಲ್ಲಿ ಮಾಫಿ ಸಾಕ್ಷಿ ಕೋರಿ ಎ14 ಪ್ರದೋಷ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 59ನೇ ಸೆಷನ್ಸ್ ನ್ಯಾಯಾಲಯ ಆರೋಪಿ ಪ್ರದೋಷ್ ಅರ್ಜಿಗೆ ದರ್ಶನ್ ಸೇರಿ ಆರೋಪಿಗಳ ವಾದ ಆಲಿಸಬೇಕಿಲ್ಲ . ಪ್ರದೋಷ್ ಮಾಫಿ ಸಾಕ್ಷಿಗೆ ಇತರೆ ಆರೋಪಿಗಳು ಆಕ್ಷೇಪಿಸುವಂತಿಲ್ಲ ಎಂದು ಆದೇಶಿಸಿದೆ.ಮಾಫಿ ಸಾಕ್ಷಿ ಅರ್ಜಿ darshan

ಪ್ರದೋಷ್  ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಸಂಬಂಧ ತಮ್ಮ ವಾದವನ್ನೂ ಆಲಿಸಬೇಕೆಂದು ಕೋರಿ ನಟ ದರ್ಶನ್ ಸೇರಿ ಇತರೆ ಆರೋಪಿಗಳ ವಕೀಲರು ಮಾಡಿದ್ದ ಮನವಿಯನ್ನು ಬೆಂಗಳೂರಿನ 59ನೇ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ.ದರ್ಶನ್ ಸೇರಿ ಆರೋಪಿಗಳ ವಾದ ಆಲಿಸಬೇಕಿಲ್ಲ jk02_new jk02 new

Key words: Renukaswamy Murder case, Pardon witness, application, Court