ಕೆಪಿಸಿಸಿ ಅಧ್ಯಕ್ಷ  ಡಿ.ಕೆ ಶಿವಕುಮಾರ್ ಗೆ ರಿಲೀಫ್: ನಾಮಪತ್ರ ಅಂಗೀಕಾರ.

ರಾಮನಗರ,ಏಪ್ರಿಲ್,21,2023(www.justkannada.in): ನಾಮಪತ್ರ ತಿರಸ್ಕೃತವಾಗುವ ಭೀತಿಯಲ್ಲಿದ್ದ ಕನಕಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಶಿವಕುಮಾರ್ ಗೆ ರಿಲೀಫ್ ಸಿಕ್ಕಿದ್ದು ನಾಮಪತ್ರ ಅಂಗೀಕಾರವಾಗಿದೆ.

ಕನಕಪುರ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಡಿ.ಕೆ ಶಿವಕುಮಾರ್ ಗೆ ನಾಮಪತ್ರ ತಿರಸ್ಕೃತವಾಗುವ ಆತಂಕ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಮುನ್ನೆಚ್ಚರಿಕಾ ಕ್ರಮವಾಗಿ ಸಹೋದರ ಸಂಸದ ಡಿ.ಕೆ ಸುರೇಶ್ ಸಹ ಕನಕಪುರ ಕಾಂಗ್ರೆಸ್ ಅಭ್ಯರ್ಥಿಯಾಗಿ  ಉಮೇದುವಾರಿಕೆ ಸಲ್ಲಿಸಿದ್ದರು.

ಇದೀಗ ಇಂದು ನಾಮಪತ್ರ ಸಲ್ಲಿಕೆ ಪರಿಶೀಲನೆ ಕಾರ್ಯ ನಡೆದಿದ್ದು ಡಿ.ಕೆ ಶಿವಕುಮಾರ್ ಅವರ ನಾಮಪತ್ರವನ್ನ ಕನಕಪುರ ಚುನಾವಣಾಧಿಕಾರಿ ಅಂಗೀಕರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Relief – KPCC president -DK Shivakumar- Nomination- paper- accepted.