ನನ್ನ ವಿರುದ್ಧ ಷಡ್ಯಂತ್ರ ಮಾಡ್ತಿದ್ದಾರೆ ಅಂತ ನನಗೆ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ-ಡಿಕೆ ಶಿವಕುಮಾರ್​.

ಬೆಂಗಳೂರು,ಏಪ್ರಿಲ್,21,2023(www.justkannada.in):  ಕನಕಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಾಮಪತ್ರ ತಿರಸ್ಕೃತ ಭೀತಿ ಎದುರಾದ ಹಿನ್ನೆಲೆ  ಸಂಸದ ಸುರೇಶ್ ಸಹ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಡಿ.ಕೆ ಶಿವಕುಮಾರ್, ನನ್ನ ವಿರುದ್ಧ ಷಡ್ಯಂತ್ರ ಮಾಡ್ತಿದ್ದಾರೆ ಅಂತ ನನಗೆ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ. ರಾಜಕೀಯದಿಂದ ನನ್ನನ್ನು ತೆಗೆದು ಹಾಕಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ  ಡಿಕೆ ಶಿವಕುಮಾರ್, ಏನು ಷಡ್ಯಂತ್ರ ಮಾಡುತ್ತಿದ್ದಾರೆ ಗೊತ್ತಿದೆ. ಕಳೆದ ಬಾರಿಯೇ ನನ್ನ ಆಸ್ತಿ ಮೌಲ್ಯದ ಬಗ್ಗೆ ವಿವರಣೆ ನೀಡಬೇಕಾಯ್ತು. ನಾನು ಹೊಸ ಆಸ್ತಿ ಯಾವುದನ್ನೂ ಕೂಡ ಖರೀದಿ ಮಾಡಿಲ್ಲ. ನನ್ನ ವಿರುದ್ದ ಷಡ್ಯಂತ್ರ ಮಾಡ್ತಿದ್ದಾರೆ ಅಂತ ನನಗೆ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ ಎಂದು ​ ಹೇಳಿದ್ದಾರೆ.

ಇವನು ಇರುವುದಕ್ಕೆ ತಾನೇ ಕಾಂಗ್ರೆಸ್ ಗಟ್ಟಿಯಾಗುತ್ತಿದೆ ಎಂದು ವಿರೋಧಿಗಳು ಏನೇನೋ ಪ್ರಯತ್ನ ಮಾಡುತ್ತಿದ್ದಾರೆ. ನಿನ್ನೆ ಬಂದ ತೀರ್ಪಿನ ಬಗ್ಗೆ ಕೇಳ್ತಾ ಇದ್ದೀರಿ. ರಾಜಕೀಯದಿಂದಲೇ ನಮ್ಮನ್ನು ತೆಗೆದು ಹಾಕಬೇಕು ಅಂತ ಪ್ರಯತ್ನ ಮಾಡುತ್ತಿದ್ದಾರೆ. ಸೋನಿಯಾ ಗಾಂಧಿ ರಾಹುಲ್ ಗಾಂಧಿಗೂ ಕಿರುಕುಳ ನೀಡುತ್ತಿದ್ದಾರೆ.  ಸೋನಿಯಾ ಗಾಂಧಿ ಅವರಿಗೆ ಕೊಡಬಾರದ ಕಾಟವನ್ನ ಕೊಡುತ್ತಿದ್ದಾರೆ. ಸೋನಿಯಾ ರಾಹುಲ್ ರನ್ನೇ ಬಿಡಲಿಲ್ಲ ನನ್ನನ್ನ ಬಿಡ್ತಾರಾ..? ಎಂದು ಪ್ರಶ್ನಿಸಿದರು.

ಕನಕಪುರದಲ್ಲಿ ಯಾರು ಸ್ಪರ್ಧಿಸ್ತಾರೆಂದು ಕಾಲವೇ ಉತ್ತರ ನೀಡುತ್ತೆ. ಷಡ್ಯಂತ್ರ, ಕುತಂತ್ರ ಎಲ್ಲವೂ ನಡೆಯುತ್ತಿದೆ. ಬಿಜೆಪಿ ನಾಯಕರು ಏನು ಬೇಕಾದರೂ ಮಾಡಿಕೊಳ್ಳಲಿ. ಯಾರ ಅನುಕಂಪ ಕೂಡ ನಮಗೆ ಬೇಕಾಗಿಲ್ಲ. ಯಾರ ಅನುಕಂಪ ಕೂಡ ನಮಗೆ ಬೇಕಾಗಿಲ್ಲ. ಮನೆಯಿಂದ ಹೊರಹಾಕಿ ಬಿಟ್ಟರೆ ನಾವು ಒದ್ದಾಡಬೇಕಾಗುತ್ತಲ್ಲ. ಅದಕ್ಕಾಗಿ ನಮ್ಮ ಎಚ್ಚರಿಕೆಯಲ್ಲಿ ನಾವಿದ್ದೇವೆ ಎಂದು ಡಿಕೆ ಶಿವಕುಮಾರ್​ ತಿಳಿಸಿದರು.

Key words: Officials – informed – plotting- against- me – DK Shivakumar.