Wednesday, October 7, 2026

BDA Apartments

immense respect BDA JK_Adv BDA Adv
Home Front Page ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹ್ಮದ್ ಖಾನ್ ನಾಮಪತ್ರ ತಿರಸ್ಕರಿಸುವಂತೆ ದೂರು.

ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹ್ಮದ್ ಖಾನ್ ನಾಮಪತ್ರ ತಿರಸ್ಕರಿಸುವಂತೆ ದೂರು.

ಬೆಂಗಳೂರು,ಏಪ್ರಿಲ್,21,2023(www.justkannada.in):  ಚಾಮರಾಜಪೇಟೆ ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹ್ಮದ್ ಖಾನ್ ನಾಮಪತ್ರ ತಿರಸ್ಕರಿಸುವಂತೆ ದೂರು ಸಲ್ಲಿಕೆಯಾಗಿದೆ.

ನಾಮಪತ್ರ ಸಲ್ಲಿಕೆ ವೇಳೆ ಜಮೀರ್ ಅಹ್ಮದ್ ಖಾನ್  ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ನವಭಾರತ ಸೇನಾ ಪಾರ್ಟಿ ಅಭ್ಯರ್ಥಿ ರುಕ್ಮಂಗದ ಎಂಬುವವರು ಚುನಾವಣಾಧಿಕಾರಿ ಹಸನ್ ಸಾಬ್ ರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

ನಾಮಪತ್ರ ಸಲ್ಲಿಕೆ ವೇಳೆ  ಜಮೀರ್ ಅಹ್ಮದ್ ಖಾನ್ ಒಂದು ಕಾಲಂ ಖಾಲಿ ಬಿಟ್ಟಿದ್ದಾರೆ.  ಜಮೀರ್ ಅಹ್ಮದ್ ಖಾನ್ ತನ್ನ ಅವಲಂಬಿತರ ಹೆಸರಿನಲ್ಲಿ ತಾಯಿ ಹೆಸರು ಸೇರಿಸಿದ್ದಾರೆ. ಲೋಕಾಯುಕ್ತಕ್ಕೆ ಮಾಹಿತಿ ಸಲ್ಲಿಸುವ ವೇಳೆ ತಾಯಿ ಹೆಸರು  ಸೇರಿಸಿದ್ದಾರೆ. ಆದರೆ ನಾಮಪತ್ರದಲ್ಲಿ ಮಾತ್ರ ತಾಯಿ ಹೆಸರು ಪ್ರಸ್ತಾಪಿಸಿಲ್ಲ ಹೀಗಾಗಿ ಜಮೀರ್ ನಾಮಪತ್ರ ತಿರಸ್ಕರಿಸುವಂತೆ ದೂರು ನೀಡಿದ್ದಾರೆ.

Key words: Complaint – reject – nomination -Congress candidate -Jameer Ahmed Khan.