ಕೆ.ಆರ್.ಎಸ್ , ಕಬಿನಿ ಜಲಾಶಯಗಳಿಂದ ಭಾರಿ ಪ್ರಮಾಣದ ನೀರು ಬಿಟ್ಟ ಹಿನ್ನೆಲೆ: ಜಲಾವೃತ ಹಂತದಲ್ಲಿ ಗ್ರಾಮಗಳು…

ಚಾಮರಾಜನಗರ,ಆ,11,2019(www.justkannada.in):  ರಾಜ್ಯದಲ್ಲಿ ಧಾರಾಕಾರ ಮಳೆಯಾದ ಹಿನ್ನೆಲೆ ಕೆ.ಆರ್.ಎಸ್ , ಕಬಿನಿ ಜಲಾಶಯಗಳಿಂದ ನದಿಗಳಿಗೆ ಬಾರಿ ಪ್ರಮಾಣದ ನೀರು ಬಿಡಲಾಗಿದ್ದು ಈ ಹಿನ್ನೆಲೆ ಚಾಮಾರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿನ ಹಲವು ಗ್ರಾಮಗಳು ಜಲಾವೃತವಾಗುವ ಹಂತ ತಲುಪಿವೆ.

ಕೆ.ಆರ್.ಎಸ್ , ಕಬಿನಿ ಜಲಾಶಯಗಳಿಂದ ನದಿಗಳಿಗೆ 2ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಕೊಳ್ಳೆಗಾಲದ ದಾಸನಪುರ, ಹಂಪಾಪುರ, ಹರಳೆ ಗ್ರಾಮಗಳಿಗೆ ಜಲ ಕಂಟಕ ಎದುರಾಗಿದೆ. ನೀರಿನ ಪ್ರಮಾಣ ಹೆಚ್ಚಾದ ಹಿನ್ನೆಲೆ ಪ್ರವಾಹ ಗ್ರಾಮವನ್ನು ಸುತ್ತುವರಿಯುತ್ತಿದೆ.

ಪ್ರವಾಹ ಭೀತಿಯಿಂದಾಗಿ ದಾಸನಪುರ ಗ್ರಾಮಸ್ಥರು ಆತಂಕದಲ್ಲಿದ್ದು ಸ್ಥಳಕ್ಕೆ  ಸ್ಥಳೀಯ ಶಾಸಕ ಎನ್ ಮಹೇಶ್ ಭೇಟಿ ನೀಡಿದ್ದಾರೆ. ಪರಿಹಾರ ಕೇಂದ್ರದತ್ತ ತೆರಳುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಲಾಗಿದ್ದು, ಗ್ರಾಮಸ್ಥರನ್ನು ಸ್ಥಳಾಂತರ ಮಾ ಡಲು ಅಧಿಕಾರಿಗಳು ಪರದಾಡುತ್ತಿದ್ದಾರೆ. ಈ ನಡುವೆ ಗ್ರಾಮಸ್ಥರು ಊರು ಬಿಟ್ಟು ಹೋಗಲು ನಿರಾಕರಿಸುತ್ತಿದ್ದಾರೆ.

Key words: release -water –KRS- Kabini –kollegal- Villages