Monday, September 14, 2026

BDA Apartments

Home Front Page ನೆರೆ ನಿರ್ವಹಣೆ ವಿಚಾರದಲ್ಲಿ ಸರ್ಕಾರಕ್ಕೆ ನಮ್ಮಿಂದ ಸಂಪೂರ್ಣ ಸಹಕಾರ-ಮೈಸೂರಿನ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ...

ನೆರೆ ನಿರ್ವಹಣೆ ವಿಚಾರದಲ್ಲಿ ಸರ್ಕಾರಕ್ಕೆ ನಮ್ಮಿಂದ ಸಂಪೂರ್ಣ ಸಹಕಾರ-ಮೈಸೂರಿನ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ..

ಮೈಸೂರು,ಆ,11,2019(www.justkannada.in):  ರಾಜ್ಯದಲ್ಲಿ ನೆರೆ ನಿರ್ವಹಣೆ ಮಾಡುವ ವಿಚಾರದಲ್ಲಿ ಸರ್ಕಾರಕ್ಕೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

ಮೈಸೂರಿನ ಮಳೆ ಹಾನಿ ಪ್ರದೇಶಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರು. ನಗರದ ಸರಸ್ವತಿಪುರಂನಲ್ಲಿ ಕುಸಿದು ಬಿದ್ದಿದ್ದ  ಅಗ್ನಿಶಾಮಕ ದಳ ಕಟ್ಟಡವನ್ನ ಹೆಚ್.ಡಿ ಕುಮಾರಸ್ವಾಮಿ ವೀಕ್ಷಣೆ ಮಾಡಿದರು. ಬಳಿಕ ಮಾತನಾಡಿದ ಅವರು, ರಾಜ್ಯದ ನೆರೆ ನಿರ್ವಹಣೆ ಯಡಿಯೂರಪ್ಪ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ.  ಅನಗತ್ಯವಾಗಿ ಟೀಕೆ ರಾಜಕಾರಣ ಮಾಡುವುದಿಲ್ಲ. ರಾಜ್ಯದ ಜನರ ಸಂಕಷ್ಟದಲ್ಲಿದ್ದಾರೆ. ನೊಂದವರಿಗೆ ನೆರವಾಗುವುದೇ ಮೊದಲ ಆಧ್ಯತೆ ಎಂದರು.

ರಾಜ್ಯ ಸರ್ಕಾರದ ಖಜಾನೆ ಸುಸ್ಥಿರವಾಗಿದೆ. 8 ಸಾವಿರ ಕೋಟಿಯನ್ನ ಮೀಸಲಿಟ್ಟಿದ್ದೇನೆ. ಹಣಕಾಸು ಸ್ಥಿತಿಯನ್ನ ಸರಿಯಲ್ಲ ಎಂಬ ಸಿಎಂ ಬಿಎಸ್ ಡಿಯೂರಪ್ಪ ಹೇಳಿಕೆ ಸರಿಯಲ್ಲ. ಯಡಿಯೂರಪ್ಪ ಈ ವಿಚಾರದಲ್ಲಿ  ಚಿಲ್ಲರೆ ರಾಜಕೀಯ ಬಿಡಬೇಕು. ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ನೆರೆ ಸಂತ್ರಸ್ತರಿಗಾಗಿ ಕೇಂದ್ರ ಸರ್ಕಾರ ನೆರೆ ನಿರ್ವಹಣೆಗೆ ತಕ್ಷಣ ಸ್ಪಂದಿಸಬೇಕು  ಎಂದು ಹೆಚ್.ಡಿಕೆ  ಆಗ್ರಹಿಸಿದರು. ಇನ್ನೆರಡು ದಿನಗಳಲ್ಲಿ ಮೈಸೂರಿನ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ ಎಂದು ಹೆಚ್.ಡಿಕೆ ತಿಳಿಸಿದರು.

ಋಣಮುಕ್ತ ಕಾಯಿದೆ ಜಾರಿ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ, ಸರ್ಕಾರ ಕೂಡಲೇ ಯೋಜನೆ ಜಾರಿಗೆ ಮುಂದಾಗಬೇಕು. 90 ದಿನದೊಳಗೆ ಯೋಜನೆ ಜಾರಿಯಾಗಬೇಕು. ಈಗಾಗಲೇ 10 ದಿನ ಕಳೆದಿದೆ. ಯೋಜನೆ ಬಗ್ಗೆ ಹಳ್ಳಿ ಗಳಲ್ಲಿ ಡಂಗುರ ಸಾರುವ ಕೆಲಸ ಆಗಬೇಕು. ಈ ಬಗ್ಗೆ ಶೀಘ್ರದಲ್ಲೇ ಜೆಡಿಎಸ್ ಕಾರ್ಯಕರ್ತರ ಮೂಲಕ ಪ್ರಚಾರ ಮಾಡಿಸುತ್ತೇನೆ ಎಂದು ಹೇಳಿದರು.

Key words: Former CM -Kumaraswamy- visit-Flood -area -Mysore