ಅಪಾಯಮಟ್ಟ ಮೀರಿ ಹರಿಯುತ್ತಿರುವ ಕಪಿಲಾ ನದಿ: ಮಲ್ಲನಮೂಲೆ ಮಠ ಜಲಾವೃತ…

ಮೈಸೂರು,ಆ,11,2019(www.justkannada.in):  ಬಿಟ್ಟು ಬಿಡದೇ ಸುರಿದ ಧಾರಾಕಾರ ಮಳೆಯಿಂದಾಗಿ ರಾಜ್ಯದಲ್ಲಿ ಹಲವು ನದಿಗಳು ಅಪಾಯಮಟ್ಟ ಮೀರಿಹರಿಯುತ್ತಿದ್ದು ಪ್ರವಾಹ ಸ್ಥಿತಿಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಕಪಿಲಾ ನದಿ ಉಕ್ಕಿಹರಿಯುತ್ತಿರುವ ಹಿನ್ನೆಲೆ ಮಲ್ಲನಮೂಲೆ ಮಠ ಜಲಾವೃತವಾಗಿದೆ.

ಕಪಿಲಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು ಈ ಹಿನ್ನೆಲೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿರುವ ಮಲ್ಲನ ಮೂಲೆ ಮಠ ಸುಮಾರು 75ರಷ್ಟು ಭಾಗ ಜಲಾವೃತವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.  ಇನ್ನು ಕಪಿಲಾ ನದಿ ನೀರು ನುಗ್ಗಿ ನಂಜನಗೂಡಿನ ಬಡಾವಣೆಗಳು ಸಹ ಜಲಾವೃತವಾಗಿದ್ದು ಜನತೆ ಕಂಗಾಲಾಗಿದ್ದಾರೆ.

ಇನ್ನು ಕಬಿನಿ ಡ್ಯಾಂನಿಂದ ನೀರು ಬಿಟ್ಟ ಹಿನ್ನೆಲೆ ಟಿ.ನರಸೀಪುರದಲ್ಲೂ  ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇನ್ನೊಂದೆಡೆ ಹೇಮಾವತಿ ನದಿ ಅಪಾಯಮಟ್ಟ ಮೀರಿ ಹರಿಯುತ್ತಿರುವುದರಿಂದ ಮಂದಗೆರೆ  ಬಳಿ ಸೇತುವೆ ಮುಳುಗಿದ್ದು ಕಿಕ್ಕೇರಿ-ಮಂದಗೆರೆ ಸಂಪರ್ಕ ಕಡಿತಗೊಂಡಿದೆ.

Key words: Kapila- River -flows – danger- Mallanamule Math -Water