ಮೈಸೂರು ದಸರಾ ಉದ್ಘಾಟನೆಗೆ ಮೈಸೂರಿನ ಇಬ್ಬರ ಹೆಸರು ಶಿಫಾರಸ್ಸು.

ಮೈಸೂರು,ಸೆಪ್ಟಂಬರ್,23,2021(www.justkannada.in): ಕಳೆದ ಬಾರಿಯಂತೆ ಈ ಬಾರಿಯೂ  ವಿಶ್ವ ವಿಖ್ಯಾತ ಮೈಸೂರು ದಸರಾ  ಸರಳ ಮತ್ತು ಸಾಂಪ್ರದಾಯಿಕವಾಗಿ ನಡೆಯಲಿದ್ದು, ದಸರಾ ಉದ್ಘಾಟನೆಗೆ ಮೈಸೂರಿನ ಇಬ್ಬರ ಹೆಸರನ್ನ ಶಿಫಾರಸ್ಸು ಮಾಡಲಾಗಿದೆ.

ಮೈಸೂರಿನ ಸಂಘಸಂಸ್ಥೆಗಳು  ದಸರಾ ಉದ್ಘಾಟನೆಗೆ ಇಬ್ಬರ ಹೆಸರನ್ನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ‌ಗೆ ಶಿಫಾರಸ್ಸು ಮಾಡಿವೆ. ರಾಷ್ಟ್ರಕವಿ ಕುವೆಂಪು ಅಳಿಯ, ಶಿವಮೊಗ್ಗ ಕುವೆಂಪು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಚಿದಾನಂದ‌ಗೌಡ, ಸುಧರ್ಮ ಸಂಸ್ಕೃತ ಪತ್ರಿಕೆ ಸಂಪಾದಕಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜಯಲಕ್ಷ್ಮಿ ಹೆಸರನ್ನ ಶಿಫಾರಸ್ಸು ಮಾಡಲಾಗಿದೆ.

ಅಂತಿಮವಾಗಿ ಉದ್ಘಾಟಕರ ಹೆಸರನ್ನ ಸಿಎಂ ಬಸವರಾಜ ಬೊಮ್ಮಾಯಿ ಆಯ್ಕೆ ಮಾಡಲಿದ್ದು, ಸಿಎಂ ಜೊತೆ ಸಚಿವ ಎಸ್.ಟಿ.ಸೋಮಶೇಖರ್ ಚರ್ಚೆ ಮಾಡಲಿದ್ದಾರೆ.

Key words: recommend -name – two men – inauguration -Mysore Dasara.

ENGLISH SUMMARY…

Two from Mysuru named to inaugurate world-famous Mysuru Dasara
Mysuru, September 23, 2021 (www.justkannada.in): The world-famous Mysuru Dasara will be held in a simple manner this year also like last year. Two names from Mysuru have been recommended to inaugurate the Dasara programs.
Several associations in Mysuru have recommended the names of two dignitaries who are from Mysuru to inaugurate the Dasara programs, to the District In-charge Minister S.T. Somashekar. They are Prof. K. Chidanandagowda, former Vice-Chancellor of the Kuvempu University, Shivamogga, who is also the son-in-law of national poet Kuvempu and Padmashri award winner Jayalakshmi, Editor, Sudharma Sanskrit Newspaper.
The Mysuru District In-charge Minister S.T. Somashekar will discuss with Chief Minister Basavaraj Bommai, who will finalize the names.
Keywords: Mysuru Dasara/ inauguration/ two names recommended/ from Mysuru