ಸಿಕ್ಸರ್ ಗಳ ದಾಖಲೆ ಬರೆಯಲು ‘ಹಿಟ್ ಮ್ಯಾನ್’ ರೋಹಿತ್ ಶರ್ಮಾ ರೆಡಿ!

ಬೆಂಗಳೂರು, ಸೆಪ್ಟೆಂಬರ್ 23, 2021 (www.justkannada.in): ಹಿಟ್ ಮ್ಯಾನ್ ರೋಹಿತ್ ಶರ್ಮಾ ಸಿಕ್ಸರ್ ಗಳ ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ಹೌದು, ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಈವರೆಗೆ ರೋಹಿತ್ ಬರೋಬ್ಬರಿ 397 ಸಿಕ್ಸರ್ ಸಿಡಿಸಿದ್ದಾರೆ. ಇನ್ನು 3 ಸಿಕ್ಸರ್ ಬಾರಿಸಿದರೆ ಈ ಸಂಖ್ಯೆ ನಾಲ್ಕು ನೂರು ಮುಟ್ಟಲಿದೆ.

ಇಂದು ರೋಹಿತ್ ನಾಯಕತ್ವದ ಮುಂಬೈ ಇಂಡಿಯನ್ಸ್ ಮತ್ತು ಇಯಾನ್ ಮಾರ್ಗನ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ರೋಹಿತ್ ಈ ದಾಖಲೆ ಮಾಡುವ ನಿರೀಕ್ಷೆ ಇದೆ.
ಅಬಿಧಾಬಿಯ ಶೇಕ್ ಜಯೇದ್ ಕ್ರೀಡಾಂಗಣದಲ್ಲಿ ನಡೆಯುವ ಹೈವೋಲ್ಟೇಜ್ ಪಂದ್ಯದಲ್ಲಿ ರೋಹಿತ್ ಸಿಕ್ಸರ್ ಗಳ ದಾಖಲೆ ಬರೆಯುವ ನಿರೀಕ್ಷೆ ಇದೆ.

ಟಿ-20 ಮಾದರಿಯ ಕ್ರಿಕೆಟ್​ನಲ್ಲಿ ಸ್ಟಾರ್ ಬ್ಯಾಟ್ಸ್​ಮನ್ ಆಗಿ ಗುರಿತಿಸಿಕೊಂಡಿರುವ ರೋಹಿತ್ ಇತಿಹಾಸ ರಚಿಸುವ ತವಕದಲ್ಲಿದ್ದಾರೆ. ಈ ಮೂಲಕ ಟಿ-20 ಕ್ರಿಕೆಟ್​ನಲ್ಲಿ 400 ಸಿಕ್ಸರ್ ಬಾರಿಸಿದ ಮೊಟ್ಟ ಮೊದಲ ಭಾರತೀಯ ಬ್ಯಾಟ್ಸ್​ಮನ್ ಎಂಬ ದಾಖಲೆಯನ್ನು ರೋಹಿತ್ ಶರ್ಮಾ ಬರೆಯಲಿದ್ದಾರೆ.

key words: Rohit Sharma ready create sixes record