Tuesday, September 29, 2026

BDA Apartments

ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ ಅತೃಪ್ತ ಶಾಸಕರು: ಮಾಜಿ ಸಚಿವ ರಾಮಲಿಂಗರೆಡ...
Home Front Page ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ ಅತೃಪ್ತ ಶಾಸಕರು: ಮಾಜಿ ಸಚಿವ ರಾಮಲಿಂಗರೆಡ್ಡಿ ವಿರುದ್ದ ಅಸಮಾಧಾನ…?

ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ ಅತೃಪ್ತ ಶಾಸಕರು: ಮಾಜಿ ಸಚಿವ ರಾಮಲಿಂಗರೆಡ್ಡಿ ವಿರುದ್ದ ಅಸಮಾಧಾನ…?

ಮುಂಬೈ,ಜು,18,2019(www.justkannada.in): ನಾವು ರಾಜೀನಾಮೆ ಹಿಂಪಡೆಯುವ ಪ್ರಶ್ನೆಯೇ ಉಲ್ಲ. ಯಾವುದೇ ಕಾರಣಕ್ಕೂ ರಾಮಲಿಂಗರೆಡ್ಡಿ  ಅವರನ್ನ ಅನುಸರಿಸಲ್ಲ ಎಂದು ಅತೃಪ್ತ ಶಾಸಕರು ಹೇಳಿಕೆ ನೀಡಿ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ.

ಮುಂಬೈ ಹೊಟೇಲ್ ನಲ್ಲಿರುವ ಅತೃಪ್ತ ಶಾಸಕರಾದ ಎಸ್.ಟಿ ಸೋಮಶೇಖರ್, ಮುನಿರತ್ನ, ಭೈರತಿ ಬಸವರಾಜು ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ವಿಡಿಯೋದಲ್ಲಿ ಮಾತನಾಡಿರುವ ಎಸ್.ಟಿ ಸೋಮಶೇಖರ್,  ರಾಮಲಿಂಗರೆಡ್ಡಿ ರಾಜೀನಾಮೆ ವಾಪಸ್ ಪಡೆದಿದ್ದಾರೆ.  ಅದ್ರೆ ಅವರನ್ನ ನಾವು ಫಾಲೋ ಮಾಡುವುದಿಲ್ಲ ಎಂದಿದ್ದಾರೆ.

ರಾಜೀನಾಮೆ ನೀಡವ ಮೊದಲು ನಾಲ್ವರು ಒಟ್ಟಾಗಿ ಕುಳಿತು ಚರ್ಚಿಸಿದ್ದವು. ಒಂದು ಬಾರಿ ರಾಜೀನಾಮೆ ನೀಡಿದ ಬಳಿಕ ಹಿಂಪಡೆಯುವುದಿಲ್ಲ  ಎಂದು ನಿರ್ಧರಿಸಿದ್ದವು.  ರಾಮಲಿಂಗರೆಡ್ಡಿ ಹಿಂಪಡೆಯುವುದಿಲ್ಲ ಎಂದಿದ್ದರು. ಆದರೆ ಈಗ ಮಾಧ್ಯಮಗಳಲ್ಲಿ ರಾಜೀನಾಮೆ ಹಿಂಪಡೆಯುವುದಾಗಿ ಹೇಳಿದ್ದಾರೆ. ಹೀಗಾಗಿ ಅವರನ್ನ ಅನುಸರಿಸುವುದಿಲ್ಲ ಎಂದು ತಿಳಿಸಿದ್ದಾರೆ.

Key words: rebel MLA- released –another- video-mumbai-hotel