ಕ್ರೇಜಿಸ್ಟಾರ್ ಮನೆಯಲ್ಲಿ ಮದುವೆ ಸಂಭ್ರಮ: ಮುಂದಿನ ತಿಂಗಳು ಮನೋರಂಜನ್ ವಿವಾಹ

ಬೆಂಗಳೂರು, ಜೂನ್ 14, 2022 (www.justkannada.in): ಕ್ರೇಜಿಸ್ಟಾರ್‌ ರವಿಚಂದ್ರನ್‌ ಹಿರಿಯ ಪುತ್ರ ಮನೋರಂಜನ್​ ರವಿಚಂದ್ರನ್​ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ.

ಹೌದು. ನಟ ರವಿಚಂದ್ರನ್ ಹಾಗೂ ಸುಮತಿ ದಂಪತಿಯ ಹಿರಿಯ ಪುತ್ರ ಮನೋರಂಜನ್ ಅವರ ಮದುವೆಯ ಬಗ್ಗೆ ಮಾಹಿತಿ ದೊರೆತಿದೆ.

ಆಗಸ್ಟ್ 21 ಹಾಗೂ 22ರಂದು ಮನೋರಂಜನ್‌ ವಿವಾಹ ನೆರವೇರಲಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಂಗೀತ ಅವರು ಮನೋರಂಜನ್​ ಸಪ್ತಪದಿ ತುಳಿಯಲಿದ್ದಾರೆ ಎನ್ನಲಾಗಿದೆ.

ಅಂದಹಾಗೆ 2017ರಲ್ಲಿ ಸಾಹೇಬ ಸಿನಿಮಾ ಮೂಲಕ ಮನೋರಂಜನ್ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ಬೃಹಸ್ಪತಿ ಸಿನಿಮಾದಲ್ಲಿ ನಡಿಸಿದರು. ನಂತರ 2021ರಲ್ಲಿ ಅವರ ಮುಗಿಲು ಪೇಟೆ ತೆರೆಕಂಡಿತ್ತು.