ಐಸಿಸಿ ಏಕದಿನ ಬೌಲರ್ ಗಳ ಶ್ರೇಯಾಂಕ: ಮತ್ತೆ ಅಗ್ರಸ್ಥಾನಕ್ಕೇರಿದ ಬುಮ್ರಾ

ಬೆಂಗಳೂರು, ಜೂನ್ 14, 2022 (www.justkannada.in): ಭಾರತ ಕ್ರಿಕೆಟ್ ತಂಡದ ಸ್ಟಾರ್ ಬೌಲರ್ ಜಸ್‌ಪ್ರಿತ್ ಬುಮ್ರಾ ಐಸಿಸಿ ಪುರುಷರ ಏಕದಿನ ಬೌಲರ್‌ಗಳ ಶ್ರೇಯಾಂಕದಲ್ಲಿ  ಮತ್ತೆ ನಂ.೧ ಸ್ಥಾನಕ್ಕೇರಿದ್ದಾರೆ.

ಮಂಗಳವಾರ ಇಂಗ್ಲೆಂಡ್ ತಂಡದ ವಿರುದ್ಧ ಕೆನಿಂಗ್ಟನ್‌ನ ಓವಲ್ ಕ್ರೀಡಾಂಗಣದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಬಲಗೈ ವೇಗಿ ವೃತ್ತಿ ಜೀವನ ಶ್ರೇಷ್ಠ ಬೌಲಿಂಗ್ (19ಕ್ಕೆ 6) ಪ್ರದರ್ಶಿಸಿದ್ದರು.

ಸುಮಾರು ೨ ವರ್ಷ ನಂ.೧ ಸ್ಥಾನ ಅಲಂಕರಿಸಿದ್ದ ಬುಮ್ರಾ ೨೦೨೦ರ ಫೆಬ್ರವರಿಯಲ್ಲಿ ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್‌ಗೆ ನಂ.೧ ಸ್ಥಾನ ಬಿಟ್ಟುಕೊಡಬೇಕಾಯಿತು.

ಈಗ ಮತ್ತೆ ಅಗ್ರಸ್ಥಾನಕ್ಕೆ ಮರಳಿದ್ದಾರೆ. ಏಕದಿನ ಶ್ರೇಯಾಂಕದಲ್ಲಿ ಕಪಿಲ್ ದೇವ್ ನಂತರ ನಂ.೧ ಸ್ಥಾನ ಪಡೆದ ಭಾರತದ ಎರಡನೇ ವೇಗದ ಬೌಲರ್ ಎಂಬ ಹಿರಿಮೆಗೆ ಬುಮ್ರಾ ಪಾತ್ರರಾಗಿದ್ದಾರೆ.

ಮಣಿಂದರ್ ಸಿಂಗ್, ಅನಿಲ್ ಕುಂಬ್ಳೆಘಿ ಮತ್ತು ರವೀಂದ್ರ ಜಡೇಜಾ ಅಗ್ರಸ್ಥಾನ ಗಳಿಸಿದ ಭಾರತದ ಇತರ ಬೌಲರ್‌ಗಳು.