Friday, August 21, 2026

BDA Apartments

Home Front Page ಮಂಡ್ಯದಲ್ಲಿ ನಿಖಿಲ್ ಸೋಲಲು ರೇವಣ್ಣ ಕಾರಣ: ಸಚಿವ ಕೆ.ಸಿ.ನಾರಾಯಣಗೌಡ ಸಿಡಿಸಿದ ಹೊಸ ಬಾಂಬ್

ಮಂಡ್ಯದಲ್ಲಿ ನಿಖಿಲ್ ಸೋಲಲು ರೇವಣ್ಣ ಕಾರಣ: ಸಚಿವ ಕೆ.ಸಿ.ನಾರಾಯಣಗೌಡ ಸಿಡಿಸಿದ ಹೊಸ ಬಾಂಬ್

ಬೆಂಗಳೂರು, ಮಾರ್ಚ್ 13, 2022 (www.justkannada.in): ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಹೆಚ್.ಡಿ.ರೇವಣ್ಣ ಕಾರಣ ಎಂಬ ಹೊಸ ಬಾಂಬ್ ಸಿಡಿಸಿದ್ದಾರೆ ಸಚಿವ ಕೆ.ಸಿ.ನಾರಾಯಣಗೌಡ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹೆಚ್.ಡಿ.ರೇವಣ್ಣ ಮಂಡ್ಯ ಕ್ಷೇತ್ರಕ್ಕೆ ಬಂದ ಅನುದಾನವನ್ನ ಹಾಸನಕ್ಕೆ ಹಾಕಿಕೊಂಡರು. ಮಂಡ್ಯನ ಖಾಲಿ ಬಿಟ್ಟರು ಎಂದು ದೂರಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಸೋಲಬೇಕಾದರೆ ಕೆಲಸಗಳು ಕಾರಣ. ರೇವಣ್ಣ ಅವರು ಲೆಟರ್ ಹೆಡ್ ನಲ್ಲಿ ಹಣ ಹೊಡೆದುಕೊಂಡು ಹೋಗಿ ಅವರ ಜಿಲ್ಲೆ ಅಭಿವೃದ್ಧಿ ಮಾಡಿಕೊಂಡರು. ಅಲ್ಲಿ ಅವರ ಮಗನ ಗೆಲ್ಲಿಸಿಕೊಂಡರು, ನಿಖಿಲ್ ರನ್ನು ಮಂಡ್ಯದಲ್ಲಿ ಸೋಲಿಸಿದರು ಎಂದು ದೂರಿದ್ದಾರೆ.

Ravanna reason for Nikhil defeat in Mandya says Minister KC Narayana Gowda