Thursday, September 24, 2026

BDA Apartments

Home Cinema ಅಮೆಜಾನ್ ಪ್ರೈಂನಲ್ಲಿ ಡಾಲಿ ಧನಂಜಯ್ ‘ರತ್ನನ್ ಪ್ರಪಂಚ’ ನೋಡಿ !

ಅಮೆಜಾನ್ ಪ್ರೈಂನಲ್ಲಿ ಡಾಲಿ ಧನಂಜಯ್ ‘ರತ್ನನ್ ಪ್ರಪಂಚ’ ನೋಡಿ !

ಬೆಂಗಳೂರು, ಅಕ್ಟೋಬರ್ 22, 2021 (www.justkannada.in): ಡಾಲಿ ಧನಂಜಯ್ ಅಭಿನಯದ ‘ರತ್ನನ್ ಪ್ರಪಂಚ’ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಿದೆ.

ಹೌದು, ಮತ್ತೊಂದು ಕನ್ನಡ ಸಿನಿಮಾ ಒಟಿಟಿ ಪ್ಲಾಟ್ ಫಾರಂನಲ್ಲಿ ರಿಲೀಸ್ ಆಗಿದೆ. ಡಾಲಿ ನಟನೆಯ ರತ್ನನ್ ಪ್ರಪಂಚ ಇಂದಿನಿಂದ ಅಮೆಝೋನ್ ಪ್ರೈಮ್ ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಡಾಲಿ ಧನಂಜಯ್ ಜೊತೆಗೆ ಹಿರಿಯ ನಟಿ ಉಮಾಶ್ರೀ ತಾಯಿಯ ಪಾತ್ರ ಮಾಡಿದ್ದು, ಅವರ ನೈಜ ಅಭಿನಯ ಎಲ್ಲರ ಗಮನ ಸೆಳೆಯುವಂತಿದೆ.

ಈ ಹಿಂದೆ ರತ್ನನ್ ಪ್ರಪಂಚ ಚಿತ್ರದ ಟೀಸರ್ ಕೂಡ ಸಾಕಷ್ಟು ಗಮನ ಸೆಳೆದಿತ್ತು. ಚಿತ್ರದ ಕುರಿತು ಸಿನಿಪ್ರಿಯರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ನಟಿ ಶ್ರುತಿ, ಅಚ್ಯುತ್ ಸೇರಿದಂತೆ ಎಲ್ಲ ನಟರ ಅಭಿನಯದ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿಬರುತ್ತಿವೆ.