ಇಡಿ ಕುರಿತ ಚರ್ಚೆಗಿಂತ ಸಿಡಿ ಚರ್ಚೆ ಹೆಚ್ಚಾಯಿತೇ? : ಹಳ್ಳಿಹಕ್ಕಿ ಎಚ್.ವಿಶ್ವನಾಥ್ ಆಕ್ರೋಶ

ಮೈಸೂರು,ಮಾರ್ಚ್,25,2021(www.justkannada.in) : ಕೋಟ್ಯಾಂತರ ಲೂಟಿಯಾಗಿರುವ ಇಡಿ ಕುರಿತು ಚರ್ಚೆ ಮಾಡುವುದಿಲ್ಲ. ಸಿಡಿ ಬಗ್ಗೆ ಚರ್ಚೆ ಮಾಡುತ್ತೀರ. ಸಿಡಿಯೇ ಹೆಚ್ಚಾಯಿತ ನಿಮಗೆ ಎಂದು ಸದನದಲ್ಲಿ ವಿರೋಧ ಪಕ್ಷಗಳು ಸರ್ಕಾರಕ್ಕೆ ಚಾಟಿ ಬಿಸಲಿಲ್ಲ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಕಿಡಿಕಾರಿದ್ದಾರೆ.jkನಿನ್ನೆ ಮುಗಿದ ಸದನ ಮುಗಿತು ಅಷ್ಟೆ. ಇದರಲ್ಲಿ ರಾಜ್ಯದ ಜನರಿಗೆ ಯಾವುದೇ ಪ್ರಯೋಜನ ಆಗಲಿಲ್ಲ. ಬಜೆಟ್ ಅಧಿವೇಶನ ಅಂದರೆ, ಆದಾಯ,ತೆರಿಗೆ,ಹಣಕಾಸಿನ ಬಗ್ಗೆ ಚರ್ಚೆ ಆಗಬೇಕಿತ್ತು. ಆದರೆ, ಅವುಗಳ  ಕುರಿತು ಚರ್ಚೆ ಆಗಲೇ ಇಲ್ಲ. ಈ ಬಜೆಟ್ ಅಧಿವೇಶನ ಜನತಂತ್ರ ವ್ಯವಸ್ಥೆಯ ಅಣಕ ಎಂದು ಟೀಕಿಸಿದ್ದಾರೆ.

ರಾಜ್ಯದಲ್ಲಿ ವಿರೋಧ ಪಕ್ಷಗಳು ಒಣಗೇಡಿತನ ಪ್ರದರ್ಶನ ಮಾಡುತ್ತಿವೆ

ಇದರಲ್ಲಿ ಸರ್ಕಾರದಷ್ಟೆ ಅಲ್ಲ ವಿರೋಧ ಪಕ್ಷದ ತಪ್ಪು ಇದೆ. ಎಲ್ಲಿ ವಿರೋಧ ಪಕ್ಷ ಬಲಿಷ್ಠವಾಗಿರುತ್ತೆ ಅಲ್ಲಿ ಸರ್ಕಾರ ಚೆನ್ನಾಗಿರುತ್ತೆ. ಆದರೆ, ರಾಜ್ಯದಲ್ಲಿ ವಿರೋಧ ಪಕ್ಷಗಳು ಒಣಗೇಡಿತನ ಪ್ರದರ್ಶನ ಮಾಡುತ್ತಿವೆ.  ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ರಾಜಕಾರಣವೇ ಹೆಚ್ಚಾಗಿದೆ. ರಾಜ್ಯ ನಾಲ್ಕು ಲಕ್ಷ ಕೋಟಿ ಸಾಲಕ್ಕೆ ಬಂದು ನಿಂತಿದೆ ಎಂದು ಅಸಮಾಧಾನವ್ಯಕ್ತಪಡಿಸಿದರು.

ಇಬ್ಬರು ಮಾಜಿ ಸಿಎಂಗಳ ಜವಬ್ದಾರಿ ಏನು?

2.5 ಲಕ್ಷ ಕೋಟಿ ಬಜೆಟ್ ಅನ್ನ ಚರ್ಚೆಯೇ ಇಲ್ಲದೆ ಮುಗಿಸಿದ್ದಾರೆ. ಇಬ್ಬರು ಮಾಜಿ ಸಿಎಂಗಳ ಜವಬ್ದಾರಿ ಏನು?, ನಿಮಗೆ ಸಿಡಿಯೇ ದೊಡ್ಡದಾಯಿತ?, ಆ ಮಂತ್ರಿಯೇ ರಾಜೀನಾಮೆ ನೀಡಿದ್ದಾರೆ ಇನ್ನೇನಿದೆ. 6 ಮಂತ್ರಿಗಳ ಮೇಲೆ ಚರ್ಚೆ, ಸುಧಾಕರ್ ಮೇಲೆ ಚರ್ಚೆ, ಇದೆ ಬೇಕಾಗಿತ್ತಾ ನಿಮಗೆ? ಬಜೆಟ್ ಅಧಿವೇಶದಲ್ಲಿ ಇದೇನಾ ಚರ್ಚೆ ಮಾಡೋದು ಎಂದು ವಾಗ್ದಾಳಿ ನಡೆಸಿದ್ದಾರೆ.

30 ದಿನ ನಡೆಯಬೇಕಿದ್ದ ಸದನ 21 ದಿನಕ್ಕೆ ಮುಕ್ತಾಯ

ಈ ಬಗ್ಗೆ ನಮಗೆ ಜವಬ್ದಾರಿ ಇಲ್ಲವೇನೋ ಎನ್ನುವ ರೀತಿ ನಡೆದುಕೊಂಡಿದ್ದೀರಿ. 30 ದಿನ ನಡೆಯಬೇಕಿದ್ದ ಸದನ 21 ದಿನಕ್ಕೆ ಮುಗಿದಿದೆ, ಅದು ಕೂಡ ನೆಟ್ಟಗಾಗಿದೆಯ?, ಒಬ್ಬ ಮಾಜಿ ಸಿಎಂ ಸದನಕ್ಕೆ ಬಂದು ಸಮಯ ವ್ಯರ್ಥ ಮಾಡಿದರು. ಇನ್ನೊಬ್ಬ ಮಾಜಿ ಸಿಎಂ ಸದನಕ್ಕೆ ಬಂದರೆ ಉಪಯೋಗ ಇಲ್ಲ ಎಂದು ಹೇಳಿದರು. ಇಂತವರು ವಿರೋಧ ಪಕ್ಷದಲ್ಲಿ ಇದ್ದರೆ ಇನ್ನೆನಾಗುತ್ತೆ. ನೀವು ರಾಜಕಾರಣ ಮಾಡಿ ಭಾರಿ ವೋಟ್ ಬ್ಯಾಂಕ್ ಹೆಚ್ಚಿಸಿಕೊಳ್ಳುತ್ತೀರಾ?, ಜನ ಎಲ್ಲವನ್ನು ನೋಡುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸಿಡಿ ಬಗ್ಗೆ ಚರ್ಚೆ ಮಾಡಿದ್ದು, ವ್ಯವಸ್ಥೆಯ ಅಣಕ

ವಿರೋಧ ಪಕ್ಷಗಳು ಇದನ್ನ ಉಪಚುನಾವಣೆಗೆ ಬಳಸಿಕೊಳ್ಳುತ್ತಿವೆ. ನಾವಿದ್ದಾಗ ಚಿನ್ನ, ವಜ್ರ ಮಾರಾಟ ಮಾಡುವ ಸ್ಥಿತಿ ಇತ್ತು. ಈಗ ಎಲ್ಲವು ಹೋಗಿದೆ. ನಾವು ವಾಪಸ್ ಬರುತ್ತೇವೆ ಅಂತ ಮಾತನಾಡುತ್ತಿದ್ದಾರೆ. ಇದರಿಂದ ಪ್ರಯೋಜನ ಇಲ್ಲ. ಆರ್ಥಿಕ ನೀತಿ ಬಗ್ಗೆ ಚರ್ಚೆ ಮಾಡದೆ ಸಿಡಿ ಬಗ್ಗೆ ಚರ್ಚೆ ಮಾಡಿದ್ದು, ವ್ಯವಸ್ಥೆಯ ಅಣಕ ಎಂದು ಬೇಸರವ್ಯಕ್ತಪಡಿಸಿದ್ದಾರೆ.

ಸುಧಾಕರ್ ಏಕಪತ್ನಿ ವ್ರತಸ್ಥ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರ ಹೇಳಿಕೆ ಬಗ್ಗೆ ನಾನು ಚರ್ಚೆ ಮಾಡೋಲ್ಲ.  ಅವರು ನಿನ್ನೆಯೇ ಕ್ಷಮೆ ಕೇಳಿದ್ದಾರೆ. ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ.  ಅದು ಮುಗಿದು ಹೋಗಿದೆ ಅದರ ಬಗ್ಗೆ ಚರ್ಚೆ ಮಾಡೋಲ್ಲ ಎಂದರು.

ಮೈಸೂರಿನ ಅಪಘಾತದ ಬಗ್ಗೆ ಸದನದಲ್ಲಿ ಚರ್ಚೆ ಆಗಬೇಕಿತ್ತು

Rather-talk-about ED-Did-CD-talk-increase?-Village bird- H.Vishwanath

ಆ ಸಿಡಿ ಹಿಡಿಯನ್ನ ವಿಷ್ಣುಚಕ್ರ ಅಂದುಕೊಂಡಿದ್ದಾರಾ? ಸದನದಲ್ಲಿ ಸಿಡಿ ಹಿಡಿದುಕೊಂಡು ಪ್ರದರ್ಶನ ಮಾಡಿದ್ದಾರೆ. ಇದರಿಂದ ಏನು ಸಿಕ್ತು‌. ಮೈಸೂರಿನ ಅಪಘಾತದ ಬಗ್ಗೆ ಸದನದಲ್ಲಿ ಚರ್ಚೆ ಆಗಬೇಕಿತ್ತು. ಆದರೆ, ಅಂತಹ ವಿಚಾರ ಚರ್ಚೆ ಬಿಟ್ಟು ಸಿಡಿಯನ್ನ ವಿಷ್ಣುಚಕ್ರದಂತೆ ತಿರುಗುಸುತ್ತಿದ್ದಾರೆ ಎಂದು ಅಸಮಾಧಾನವ್ಯಕ್ತಪಡಿಸಿದರು.

key words : Rather-talk-about ED-Did-CD-talk-increase?-Village bird- H.Vishwanath