10 ಸಿಡಿ ಬಂದರೂ ಎದುರಿಸಲು ಸಿದ್ಧ : ನನ್ನ ಬಳಿಯೂ ಮಹತ್ವದ ಎವಿಡೆನ್ಸ್ ಇದೆ – ಮಾಜಿ ಸಚಿವ ರಮೇಶ್ ಜಾರಕಿಹೊಳಿ….

ಬೆಂಗಳೂರು,ಮಾರ್ಚ್,25,2021(www.justkannada.in):   ಯುವತಿಯಿಂದ ಮತ್ತೊಂದು ವಿಡಿಯೋ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, 10  ಸಿಡಿ ಬಂದರೂ ಎದುರಿಸಲು ಸಿದ್ಧ. ನನ್ನ ಬಳಿಯೂ ಮಹತ್ವದ ಎವಿಡೆನ್ಸ್ ಇದೆ. ಅದನ್ನ ಬಿಡುಗಡೆ ಮಾಡಿದ್ರೆ ಶಾಕ್ ಆಗ್ತೀರಿ ಎಂದು ಹೇಳಿದ್ದಾರೆ.jk

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ರಮೇಶ್ ಜಾರಕಿಹೊಳಿ, 10 ಸಿಡಿ ಬರಲಿ ಎದುರಿಸಲು ಸಿದ್ಧನಿದ್ದೇನೆ.  ನಾನು ಆರೋಪ ಮುಕ್ತನಾಗಿ ಹೊರ ಬರುವ ವಿಶ್ವಾಸವಿದೆ. ದೇವರ ಆಶೀರ್ವಾದದಿಂದ ನಾನು ಹೊರಗೆ ಬರುತ್ತೇನೆ. ಇದರ ಹಿಂದೆ ದೊಡ್ಡ ಪ್ರಮಾಣದ ಷಡ್ಯಂತ್ರ ಇದೆ. ನನ್ನ ಬಳಿಯೂ  ಎವಿಡೆನ್ಸ್ ಇದೆ. ಎವಿಡೆನ್ಸ್ ಬಿಡುಗಡೆ ಮಾಡಿದ್ರೆ ಶಾಕ್ ಆಗುತ್ತೀರಿ. ಸಮಯ ಬಂದಾಗ ಮಹಾ ನಾಯಕನ ಹೆಸರನ್ನು ಬಹಿರಂಗಪಡಿಸುತ್ತೇನೆ ಎಂದು ಹೇಳಿದರು. Ready - face 10 CD'-significant –Evidence- Former Minister -Ramesh jarakiholli.

ಸಿದ್ಧರಾಮಯ್ಯ ಮೇಲೆ ಗೌರವವಿತ್ತು.  ಸಿದ್ದರಾಮಯ್ಯ ಮಾತು ಕೇಳಿ ಶಾಕ್ ಆಗಿದೆ.  ನನ್ನ ವಿರುದ್ಧ  ರೇಪ್ ಕೇಸ್ ಹಾಕಲಿ ಎಂದಿದ್ದಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

Key words: Ready – face 10 CD’-significant –Evidence- Former Minister -Ramesh jarakiholli.