Monday, October 12, 2026

Dasara Wishes

ಯಾದಗಿರಿಗೆ ಕೇಂದ್ರ ಅಧ್ಯಯನ ತಂಡ ಭೇಟಿ: ನೆರೆಹಾನಿ ಪ್ರದೇಶಗಳ ಪರಿಶೀಲನೆ DasraWishes_...
Happy Dasara
Home Front Page ರಣಜಿ ಕ್ರಿಕೆಟ್: 23 ವರ್ಷಗಳ ಬಳಿಕ ಫೈನಲ್ಸ್ ಪ್ರವೇಶಿಸಿದ ಮಧ್ಯಪ್ರದೇಶ

ರಣಜಿ ಕ್ರಿಕೆಟ್: 23 ವರ್ಷಗಳ ಬಳಿಕ ಫೈನಲ್ಸ್ ಪ್ರವೇಶಿಸಿದ ಮಧ್ಯಪ್ರದೇಶ

ಬೆಂಗಳೂರು, ಜೂನ್ 18, 2022 (www.justkannada.in): ರಣಜಿ ಕ್ರಿಕೆಟ್ ನಲ್ಲಿ ಸೆಮಿ ಫೈನಲ್ ನಲ್ಲಿ ಬೆಂಗಾಲ್ ತಂಡವನ್ನು ಮಣಿಸಿದ ಆದಿತ್ಯ ಶ್ರೀವಾಸ್ತವ್ ನೇತೃತ್ವದ ಮಧ್ಯ ಪ್ರದೇಶ ತಂಡ ಫೈನಲ್ಸ್ ತಲುಪಿದೆ.

ಮಧ್ಯ ಪ್ರದೇಶ ತಂಡ 23 ವರ್ಷಗಳ ಬಳಿಕ ರಣಜಿ ಟ್ರೋಫಿ ಕೂಟದಲ್ಲಿ ಮಧ್ಯಪ್ರದೇಶ ತಂಡ ಫೈನಲ್ ಪ್ರವೇಶಿಸಿದೆ.

ಗೆಲ್ಲಲು 350 ರನ್ ಗುರಿ ಪಡೆದ ಬೆಂಗಾಲ ತಂಡ ಕೇವಲ 175 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಇದರೊಂದಿಗೆ ಮಧ್ಯ ಪ್ರದೇಶ ತಂಡ 174 ರನ್ ಅಂತರದ ಗೆಲುವು ಸಾಧಿಸಿದೆ.

1999ರಲ್ಲಿ ಮೊದಲ ಬಾರಿಗೆ ಮಧ್ಯಪ್ರದೇಶ ರಣಜಿ ಟ್ರೋಫಿ ಫೈನಲ್ ಪ್ರವೇಶಿಸಿದ ಸಾಧನೆ ಬರೆದಿತ್ತು. ಇದೀಗ 23 ವರ್ಷಗಳ ಬಳಿಕ ಮತ್ತೊಮ್ಮೆ ಪ್ರಶಸ್ತಿ ಸುತ್ತಿಗೇರಿದೆ.