Sunday, September 13, 2026

BDA Apartments

ರಣಜಿ ಕ್ರಿಕೆಟ್: ಕರ್ನಾಟಕ-ತಮಿಳುನಾಡು ಹೋರಾಟ ಶುರು BDA JK_Adv BDA Adv
Home Front Page ರಣಜಿ ಕ್ರಿಕೆಟ್: ಕರ್ನಾಟಕ-ತಮಿಳುನಾಡು ಹೋರಾಟ ಶುರು

ರಣಜಿ ಕ್ರಿಕೆಟ್: ಕರ್ನಾಟಕ-ತಮಿಳುನಾಡು ಹೋರಾಟ ಶುರು

ಬೆಂಗಳೂರು, ಡಿಸೆಂಬರ್ 09, 2019 (www.justkannada.in): ಕರ್ನಾಟಕ ಮತ್ತು ತಮಿಳುನಾಡು ತಂಡಗಳು ಮತ್ತೆ ಸೋಮವಾರ ಸೆಣಸಾಟಕ್ಕೆ ಇಳಿಯಲಿವೆ.

ದಿಂಡಿಗಲ್‌ನ ಎನ್‌.ಪಿ.ಆರ್. ಕಾಲೇಜು ಮೈದಾನದಲ್ಲಿ ಅರಂಭವಾಗಲಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ‘ಬಿ’ ಗುಂಪಿನ ಮೊದಲ ಪಂದ್ಯದಲ್ಲಿ ಉಭಯ ತಂಡಗಳು ಆಡಲಿವೆ.

ಅಕ್ಟೋಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಫೈನಲ್, ಹೋದ ತಿಂಗಳು ಸೂರತ್‌ನಲ್ಲಿ ನಡೆದಿದ್ದ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಸೂಪರ್ ಲೀಗ್ ಮತ್ತು ಫೈನಲ್ ಪಂದ್ಯಗಳಲ್ಲಿ ತಮಿಳುನಾಡು ತಂಡವು ಕರ್ನಾಟಕದ ಎದುರು ಆಡಿತ್ತು. ಈ ಎಲ್ಲ ಪಂದ್ಯಗಳಲ್ಲಿಯೂ ಸೋತಿತ್ತು.