ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಜಾಗೊಳಿಸುವಂತೆ ಆಗ್ರಹ: ಮೈಸೂರಿನಲ್ಲಿ ಪ್ರಗತಿಪರ ಚಿಂತಕರಿಂದ ಪ್ರತಿಭಟನೆ…

ಮೈಸೂರು,ಫೆ,19,2020(www.justkannada.in): ಟಿಪ್ಪು ಹಾಗೂ ಪ್ರಗತಿಪರ ಚಿಂತಕರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನ  ಖಂಡಿಸಿ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಿರುದ್ಧ  ಪ್ರಗತಿಪರ ಚಿಂತಕರು ಪ್ರತಿಭಟನೆ ನಡೆಸಿದರು.

ಟಿಪ್ಪು ಹಾಗೂ ಪ್ರಗತಿಪರ ಚಿಂತಕರ ಬಗ್ಗೆ ಅಡ್ಡಂಡ ಕಾರ್ಯಪ್ಪ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಮೈಸೂರಿನ ಪ್ರಗತಿಪರ ಚಿಂತಕರ ಕೆಣಕುತ್ತಿದ್ದಾರೆ ಎಂದು ಆರೋಪಿಸಿ ಪ್ರಗತಿಪರ ಚಿಂತಕರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

ಹಾಗೆಯೇ ಅಡ್ಡಂಡ ಕಾರ್ಯಪ್ಪ ವಿರುದ್ದ ಧಿಕ್ಕಾರ ಘೋಷಣೆ ಕೂಗಿದ ಪ್ರತಿಭಟನಾಕಾರರು, ಕಾರ್ಯಪ್ಪ ವಜಾಗೊಳಿಸಿ, ರಂಗಾಯಣ ಉಳಿಸಿ ಎಂದು ಭಿತ್ತಿಪತ್ರ ಹಿಡಿದು ಅಡ್ಡಂಡ ಕಾರ್ಯಪ್ಪರನ್ನ ವಜಾಗೊಳಿಸಿವಂತೆ ಆಗ್ರಹಿಸಿದರು. ಜತೆಗೆ ಕೂಡಲೇ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಕ್ಷಮೆಯಾಚಿಸಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದರು.

Key words: rangayana-Director – Demand –dismiss-mysore- protest- thinkers