ಫೇಸ್ ಬುಕ್ ನೋಡಿ ಅದ್ಭುತ ಕಲಾವಿದನಾಗಿ ಬದಲಾದ ಗ್ರಾಮೀಣ ಯುವಕ: ಈತನ ಕಲೆ ನೋಡಿದ್ರೆ ಎಲ್ಲರೂ ಅಚ್ಚರಿ ಪಡೋದು ಗ್ಯಾರಂಟಿ…

ಕೊಡಗು,ಫೆಮ,19,2020(www.justkannada.in): ಸಾಮಾಜಿಕ ಜಾಲತಾಣಗಳಿಂದ ಯುವಕರು ದಾರಿ ತಪ್ಪುತ್ತಿದ್ದಾರೆ ಎನ್ನುವ ಕೆಲವರ ಆರೋಪದ ನಡುವೆ ಫೇಸ್‌ಬುಕ್ ನೋಡಿ ಯರವ ಜನಾಂಗದ ಯುವಕನೊಬ್ಬ ಅದ್ಭುತ ಕಲಾವಿದನಾಗಿ ಬದಲಾಗಿದ್ದು, ನಿಜ ಜೀವನದಲ್ಲಿ ಏಕಲವ್ಯನ ಕಥೆಯನ್ನು ನೆನಪಿಸುತ್ತಿದ್ದಾನೆ.

ಖ್ಯಾತ ಕಲಾವಿದರೇ ಈ ಯುವಕನ ಸಾಧನೆಗೆ ತಲೆದೂಗಿದ್ದು, ಆತನಿಗೆ ಅವಕಾಶ ಕೊಟ್ಟರೆ ರಾಜ್ಯದ ಒಬ್ಬ ಅದ್ಭುತ ಕಲೆಗಾರನಾಗುತ್ತಾನೆ. ತಾಂತ್ರಿಕತೆ, ವೃತ್ತಿಪರ ತರಬೇತಿ ಇಲ್ಲದೆ ಕೇವಲ ತನ್ನಲ್ಲಿರುವ ಸ್ಪೂನ್, ಗಾರೆಕತ್ತಿ, ಟೂತ್‌ಬ್ರಷ್‌ನಿಂದಲೇ ಆತ ಸೃಷ್ಟಿಸಿದ ಕಲೆ ಅಚ್ಚರಿ ಮೂಡಿಸುತ್ತದೆ. ಈತನ ಕಲಾಕೃತಿಗಳನ್ನು ನುರಿತ ಕಲಾವಿದರ ಕೃತಿಗಳೊಂದಿಗೆ ಇಟ್ಟಲ್ಲಿ ಪ್ರತ್ಯೇಕ್ಷಿಸಲು ಸಾಧ್ಯವಿಲ್ಲ. ಅಲ್ಲದೆ, ಅವರಲ್ಲಿ ಹಲವು ಕೃತಿಗಳನ್ನು ಮೀರಿಸುತ್ತದೆ ಎಂದು ಅಭಿಪ್ರಾಯಪಡುತ್ತಾರೆ.

ಹೆಸರು ಯರವರ ದಿನೇಶ್. ತಂದೆ ತಾಯಿ ಕೊಡಗಿನ ವಿರಾಜಪೇಟೆ ತಾಲೂಕಿನ ದೇವಣಗೇರಿಯಲ್ಲಿ ಕೂಲಿ ಕೆಲಸ ಮಾಡುತ್ತಾರೆ. ದಿನೇಶ್ ಕೂಡ ಅಲ್ಲಲ್ಲಿ ಕೂಲಿ ಮಾಡುತ್ತಾ, ದುಡಿಯುವ ಕಾಫಿ ತೋಟದಲ್ಲಿಯೇ ಒಂದು ಪ್ಲಾಸ್ಟಿಕ್ ಗುಡಿಸಲು ಕಟ್ಟಿಕೊಂಡು ಅದರಲ್ಲಿನ ಕಲಾ ಪ್ರಪಂಚದಲ್ಲಿ ಮುಳುಗಿದ್ದಾರೆ. ಯಾವ ಗುರು, ಶಾಲೆ, ಮಾರ್ಗದರ್ಶಕ ಇಲ್ಲದಿದ್ದರೂ ದೇವರ ವರ ಎಂಬಂತೆ ಅತ್ಯಾಕರ್ಷಕ ಕಲಾಕೃತಿಗಳನ್ನು ಸೃಷ್ಟಿಸುತ್ತಿದ್ದರೂ ಇನ್ನೂ ಹೊರಲೋಕದ ಕಣ್ಣಿಗೆ ಬಿದ್ದಿಲ್ಲ.

ಈತ ತನ್ನ ಪಾಡಿಗೆ ತಾನು ಕಾಂಕ್ರಿಟ್ ಕತ್ತಿ ಹಾಗೂ ಟೀ ಸ್ಪೂನ್ ಬಳಸಿ  ಬುದ್ಧನ ಅದ್ಭುತವಾದ ಪುತ್ಥಳಿಯೊಂದನ್ನು ತಯಾರಿಸಿದರು. ಅಕಾಸ್ಮಿಕವಾಗಿ ಇದು ಕುಶಾಲನಗರದ ಪ್ರತಿಷ್ಠಿತ ವ್ಯಕ್ತಿಯೊಬ್ಬರ ಕಣ್ಣಿಗೆ ಬಿದ್ದು ಅಚ್ಚರಿ ವ್ಯಕ್ತಪಡಿಸಿದರು. ಅದಕ್ಕೆ ಕೇಳದೆಯೇ 30 ಸಾವಿರ ರೂ.ಗಳನ್ನು ನೀಡಿ ತಮ್ಮ ಶಾಲೆಯ ಮುಂದೆ ಪ್ರತಿಷ್ಠಾಪಿಸಿದರು. ಮನೆಯ ಮುಂದೆ ಹೀಗೆ ಮಾಡಿಟ್ಟ ಕಲಾಕೃತಿ, ಪುತ್ಥಳಿ, ವಿಗ್ರಹಗಳನ್ನು ಜನರು ತೆಗೆದುಕೊಂಡು ಹೋಗಿ ತಮ್ಮ ಮನೆಗಳಲ್ಲಿ ತೂಗು ಹಾಕಿರುವುದೂ ಇದೆ. ಆದರೆ, ಈತನನ್ನು ಇಲ್ಲಿವರೆಗೆ ಗುರುತಿಸುವ ಕಾರ್ಯ ಆಗಲಿಲ್ಲ.

ಯರವ ಜನಾಂಗದ ಸ್ಥಿತಿ: ಅಳಿವಿನ ಅಂಚಿನಲ್ಲಿರುವ ಬುಡಕಟ್ಟು ಜನಾಂಗಗಳಲ್ಲಿ ಯರವರು ಪ್ರಮುಖರು. ದುಡಿಮೆ ಇಲ್ಲದಿದ್ದಲ್ಲಿ ಹೊಟ್ಟೆಗೆ ಹಿಟ್ಟಿಲ್ಲ. ಇದರ ನಡುವೆ ಕುಡಿತದ ಚಟಕ್ಕೆ ಹಲವು ಬಂದಿ ಬಲಿಯಾಗಿದ್ದಾರೆ. ಇಂತಹ ಜನಾಂಗದಲ್ಲಿ ಹುಟ್ಟಿದರೂ ಸಾರಾಯಿಯ ಮುಖ ನೋಡದೆ, ಎಲ್ಲರೂ ಹೆಂಡ ಕುಡಿಯಲು ಹೋದರೆ ತನ್ನ ಮುರುಕಲು ಗುಡಿಸಲಿನಲ್ಲಿ ಕಲ್ಲು ಕೆತ್ತುತ್ತಾರೆ. ಚಿತ್ರ ಬಿಡಿಸುತ್ತಾರೆ.

ಗುರುವಿಗೇ ಅಚ್ಚರಿ

ಇದಂತೂ ಸ್ವಾರಸ್ಯಕರ ಪ್ರಸಂಗ.ಫೆಸ್‌ಬುಕ್‌ನಲ್ಲಿ ಕೇರಳದ ಖ್ಯಾತ ಚಿತ್ರಕಲಾವಿದರೊಬ್ಬರು ಟ್ರೆಂಡ್ ಆಗಿದ್ದಾರೆ. ಈ ಕಾಲವಿದರಿಗೆ ನೂರಾರು ಶಿಷ್ಯರಿದ್ದಾರೆ. ಒಮ್ಮೆ ಅವರಲ್ಲಿಯೇ ತಮ್ಮ ಗುರುವಿನ ಚಿತ್ರವನ್ನು ಬಿಡಿಸುವ ಸ್ಪರ್ಧೆ ನಡೆಯುತ್ತದೆ. ಹಲವು ವರ್ಷಗಳ ಕಾಲ ಗುರುವಿನಿಂದ ವಿದ್ಯೆ ಕಲಿತವರು. ಅವರೆಲ್ಲರೂ ಗುರುವಿನ ಚಿತ್ರ ಬಿಡಿಸಿ ೇಸ್‌ಬುಕ್‌ಗೆ ಹಾಕುತ್ತಾರೆ. ಆದರೆ, ಗುರುವಿಗೆ ತೃಪ್ತಿಯಾಗುವುದಿಲ್ಲ. ಅಲ್ಲಿನ ತಪ್ಪುಗಳನ್ನು ಎತ್ತಿ ತೋರಿಸುತ್ತಾರೆ. ಇದನ್ನು ಗಮನಿಸಿದ ಯರವರ ದಿನೇಶ್ ರಾತ್ರಿಯಿಡೀ ಫೇಸ್‌ಬುಕ್‌ನಲ್ಲಿ ಆ ಗುರುವಿನ ೊಟೋವನ್ನು ನೋಡಿ ಬಿಡಿಸಿ ಅಪ್‌ಲೋಡ್ ಮಾಡುತ್ತಾರೆ. ಆ ಗುರು ದಿನೇಶನ ಕಲೆಗೆ ಬೆರಗಾಗುತ್ತಾರೆ. ‘‘ನೀನೊಬ್ಬ ಅದ್ಭುತ ಕಲಾವಿದ. ಎಲ್ಲಿ ಈ ವಿದ್ಯೆ ಕಲಿತೆ? ನಿನ್ನ ಗುರು ಯಾರು? ಎಂದು ಕೇಳುತ್ತಾರೆ. ಆದರೆ, ದಿನೇಶ್ ಉತ್ತರ ನೀಡದೆ ಮೌನರಾದರು.

ಮತ್ತೊಬ್ಬ ಹನುಮಂತ

ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಪ್ರತಿಭೆಗಳಿದ್ದರೂ ಅವಕಾಶ ಸಿಗದೆ ಮೂಲೆಗುಂಪಾಗುತ್ತಾರೆ. ಅಂತಹದರಲ್ಲಿ ಕೆಲವರನ್ನು ಅದೃಷ್ಟ ಬೆಳಕಿಗೆ ತರುತ್ತದೆ. ಕುರಿಗಾಯಿ ಹುನುಮಂತ ಕೆಲ ವರ್ಷಗಳ ಹಿಂದೆ ಕುರಿಮಂದೆಯಲ್ಲಿ ಕಳೆದುಹೋಗುತ್ತಿದ್ದ. ಇಂದು ಆತ ದೊಡ್ಡ ಹಾಡುಗಾರ, ಸೆಲೆಬ್ರಿಟಿ. ಅದೇ ರೀತಿ ಅವಕಾಶ ಸಿಕ್ಕರೆ ಶಿಲ್ಪಕಲೆ, ಚಿತ್ರಕಲೆಯಲ್ಲಿ ಯರವರ ದಿನೇಶ್ ಕೂಡ ಹೊರಹೊಮ್ಮುತ್ತಾರೆ. ಸೂಕ್ತ ವೇದಿಕೆ ಕಲ್ಪಿಸಿ, ಪ್ರೋತ್ಸಾಹ ನೀಡಬೇಕಿದೆ.

ಕೃಪೆ…

ವಿಜಯ ಕರ್ನಾಟಕ

Key words: kodagu-rural -young man – Facebook –  wonderful –artist-achievement.