ಬೆಂಗಳೂರು,ಜನವರಿ,25,2023(www.justkannada.in): ಪಿಎಸ್ ಐ ನೇಮಕಾತಿ ಹಗರಣವನ್ನ ಸರ್ಕಾರ ಮುಚ್ಚಿ ಹಾಕಲು ಯತ್ನಿಸುತ್ತಿದೆ. ಹೀಗಾಗಿ ಹಗರಣ ಕುರಿತು ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪ ಮಾಡಿದರು. ![]()
ಬೆಂಗಳೂರಿನಲ್ಲಿ ಇಂದು ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ,. ಸಿಎಂ ಬಸವರಾಜ ಬೊಮ್ಮಾಯಿ 1 ಲಕ್ಷ ರೂ. ಉದ್ಯೋಗ ಸೃಷ್ಠಿ ಅಂತಾರೆ. ಪೊಲೀಸ್ ಸಬ್ ಇನ್ಸ್ ಫೆಕ್ಟರ್ ಸೇರಿ ಎಲ್ಲಾ ಹುದ್ದೆಗಳು ಮಾರಾಟಕ್ಕಿದೆ ಈಗಾಗಲೇ ಪಿಎಸ್ ಐ ಹಗರಣ ಜನರಿಗೆ ಗೊತ್ತಿದೆ.
ಬಿಜೆಪಿಯವರು ವಿಧಾನಸೌಧವನ್ನ ದುಡ್ಡು ಸ್ವೀಕರಿಸಲು ಇಟ್ಟುಕೊಂಡಿದ್ದಾರೆ. 3 ಕೋಟಿ ಬೇಡಿಕೆ ಇಟ್ಟಿದ್ದಾರೆಂದು ಆರ್ ಡಿ ಪಾಟೀಲ್ ಆರೋಪಿಸಿದ್ದಾರೆ. ಈ ಬಾರಿ ಚುನಾವಣೆಗೂ ಆರ್ ಡಿ ಪಾಟೀಲ್ ಸ್ಪರ್ಧಿಸಬಹುದು ಎಂದರು.
ನ್ಯಾಯಾಧೀಶರ ನೇತೃತ್ವದಲ್ಲಿ ಪಿಎಸ್ ಐ ಹಗರಣ ತನಿಖೆಯಾಗಬೇಕು. ಇಲ್ಲದಿದ್ದರೇ ಸಿಎಂ ಗೃಹ ಸಚಿವರ ವಿರುದ್ಧ ಕೇಸ್ ಮುಚ್ಚಿಹಾಕಲು ಪ್ರಯತ್ನಿಸುತ್ತಾರೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದರು.
Key words:Randeep Singh Surjewal- accused -trying – PSI -scam.






