ಈ ಬಾರಿಯ  ಗಣರಾಜ್ಯೋತ್ಸವ ಮುಖ್ಯ ಅತಿಥಿಗೆ ಭವ್ಯ ಸ್ವಾಗತ.

ನವದೆಹಲಿ,ಜನವರಿ,25,2023(www.justkannada.in):  74ನೇ ಗಣರಾಜ್ಯೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು ಈ ಬಾರಿ ಮುಖ್ಯ ಅತಿಥಿಗಳಾಗಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಆಗಮಿಸಿದ್ದಾರೆ.

ಗಣರಾಜ್ಯೋತ್ಸವದ ಪರೇಡ್‌ ನಲ್ಲಿ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಪಾಲ್ಗೊಳ್ಳಲಿದ್ದು ನವದೆಹಲಿಗೆ ಆಗಮಿಸಿದರು. ಇನ್ನು ರಾಷ್ಟ್ರಪತಿ ಭವನದಲ್ಲಿ  ಅವರಿಗೆ ಭವ್ಯ ಸ್ವಾಗತ ನೀಡಿ ಗೌರವಿಸಲಾಯಿತು.

ಗಣರಾಜ್ಯೋತ್ಸವದಂದು ಈಜಿಪ್ಟ್ ಅಧ್ಯಕ್ಷರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿರುವುದು ಇದೇ ಮೊದಲು.ಭಾರತವು ತನ್ನ ಜಿ20 ಪ್ರೆಸಿಡೆನ್ಸಿ ಅವಧಿಯಲ್ಲಿ ಈಜಿಪ್ಟ್ ಅನ್ನು ಅತಿಥಿ ದೇಶ ಎಂದು ಆಹ್ವಾನಿಸಿದೆ.

Key words:  grand -welcome – Chief Guest – Republic Day.