ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆ ಪ್ರಕರಣ: ಯುವತಿಯ ಮತ್ತೊಂದು ವಿಡಿಯೋ ರಿಲೀಸ್…

ಬೆಂಗಳೂರು,ಮಾರ್ಚ್,27,2021(www.justkannada.in):  ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಯುವತಿ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ.jk

ಇದು 4ನೇ ವಿಡಿಯೋ ಆಗಿದ್ದು, ವಿಡಿಯೋದಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.  ರಮೇಶ್ ಜಾರಕಿಹೊಳಿ  ಒಂದೇ ದಿನದಲ್ಲಿ ಸರ್ಕಾರ ಬೀಳಿಸುತ್ತೇನೆ ಎಂದು ಹೇಳ್ತಾರೆ. ಎಷ್ಟೇ ಹಣ ಖರ್ಚಾದರೂ ಸರಿ ಎಲ್ಲರನ್ನೂ ಜೈಲಿಗೆ ಹಾಕಿಸುತ್ತೇನೆ ಎನ್ನುತ್ತಾರೆ. ಅವರು ಈ ರೀತಿ ಹೇಳಿದ್ರೆ ಏನು ಅರ್ಥ. ಇದನ್ನ ಜನರೇ ಅರ್ಥ ಮಾಡಿಕೊಳ್ಳಬೇಕು ಎಂದು ಯುವತಿ ಹೇಳಿದ್ದಾರೆ.Ramesh jarakiholi -CD -release case-Another -video -release - young woman.

ಹಾಗೆಯೇ ನನ್ನ ತಂದೆ ತಾಯಿಯ ತಲೆ ತೆಗೆಯಬಹುದು. ಅಥವಾ ನನ್ನನ್ನು ಸಾಯಿಸಬಹುದು. ಏನಾಗುತ್ತದೆಯೋ ಎಂದು ಗೊತ್ತಿಲ್ಲ. ನಮ್ಮ ತಂದೆ ತಾಯಿಗೆ ರಕ್ಷಣೆ ಇಲ್ಲ. ನಾನು ಹೇಳಿಕೆ ನೀಡಬೇಕಾದರೇ ನನ್ನ ಕಣ್ಣ ಮುಂದೆ ನಮ್ಮ ತಂದೆ ತಾಯಿ ಇರಬೇಕು. ರಮೇಶ್ ಜಾರಕಿಹೊಳಿ ಹೆಸರು ಬರೆದು ಸಾಯಬೇಕು ಎನ್ನಿಸುತ್ತಿದೆ. ನನಗೆ ಅಷ್ಟೊಂದು ಕಿರುಕುಳವಾಗಿದೆ ಎಂದು ವಿಡಿಯೋದಲ್ಲಿ ಯುವತಿ ತಿಳಿಸಿದ್ದಾರೆ.

Key words: Ramesh jarakiholi -CD -release case-Another -video -release – young woman.