ರಾಮನಗರದಲ್ಲಿ 63 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ: ಕಾಮಗಾರಿ ಪರಿಶೀಲಿಸಿದ ಡಿಸಿಎಂ ಅಶ್ವಥ್ ನಾರಾಯಣ್….

ರಾಮನಗರ,ಜು,27,2020(www.justkannada.in):  ಜಿಲ್ಲಾ ಕೇಂದ್ರದಲ್ಲಿ 63 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 250 ಹಾಸಿಗೆಗಳ ಸುಸುಜ್ಜಿತ ಆಸ್ಪತ್ರೆಯ ಕಾಮಗಾರಿಯನ್ನು ಉಪ ಮುಖ್ಯಮಂತ್ರಿ ಡಾ. ಸಿ.ಎನ್.‌ ಅಶ್ವತ್ಥನಾರಾಯಣ್ ಅವರು ಪರಿಶೀಲನೆ ನಡೆಸಿದರು.ramanagara-63-crore-hospital-dcm-ashwath-narayan

ಬೆಂಗಳೂರಿನಿಂದ ಬರುವಾಗಲೇ ತಮ್ಮ ಜತೆಯಲ್ಲಿ ಮಣಿಪಾಲ್‌ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಮುರಳಿ, ಡಾ. ಶ್ರೀರಾಮ ಅವರನ್ನು ಕರೆದುಕೊಂಡು ಬಂದಿದ್ದ   ಡಿಸಿಎಂ ಅಶ್ವಥ್ ನಾರಾಯಣ್,  ಅವರೊಂದಿಗೆ ಇಡೀ ಆಸ್ಪ್ರತ್ರೆಯನ್ನು ಸುತ್ತುಹಾಕಿದರು ಹಾಗೂ 6 ತಿಂಗಳಲ್ಲಿ ಕಾಮಗಾರಿ ಮುಗಿಸಲು ಅಧಿಕಾರಿಗಳಿಗೆ ಸೂಚಿಸಿದರು. ಮಣಿಪಾಲ್‌ ಆಸ್ಪತ್ರೆಯ ತಜ್ಞರು ಹೊಸ ಆಸ್ಪತ್ರೆಗಳನ್ನು ಸಿದ್ಧಪಡಿಸುವುದರಲ್ಲಿ ಪರಿಣಿತಿ ಹೊಂದಿದ್ದು, ಇಂತಹ ಆಸ್ಪತ್ರೆ ನಿರ್ಮಾಣಕ್ಕೆ ಅವರ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.ramanagara-63-crore-hospital-dcm-ashwath-narayan

ಜಾಗತಿಕ ಗುಣಮಟ್ಟದ ಎಲ್ಲ ಸೌಲಭ್ಯಗಳು ಈ ಆಸ್ಪತ್ರೆಯಲ್ಲಿ ಇರುತ್ತವೆ. ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಪರಿಕರಗಳನ್ನು ಅಳವಡಿಸಲಾಗುವುದು. ಬೆಂಗಳೂರು- ಮೈಸೂರು ರಸ್ತೆಯ ಆಯಕಟ್ಟಿನಲ್ಲಿರುವ ಈ ಆಸ್ಪತ್ರೆಯನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕಂತೆ ರೂಪಿಸಲಾಗುವುದು. ಇದಕ್ಕೆ ಸಂಬಂಧಿಸಿ ತಜ್ಞ ವೈದ್ಯರ ಜತೆ ನಿರಂತರವಾಗಿ ಮಾತುಕತೆ ನಡೆಸಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು. ಜಿಲ್ಲಾಧಿಕಾರಿ ಅರ್ಚನಾ, ಸಿಇಒ ಇಕ್ರಂ, ಡಿಎಚ್ ಒ ಡಾ. ನಿರಂಜನ ಇದ್ದರು.

Key words: Ramanagara-63 crore – Hospital- DCM- Ashwath Narayan