Monday, October 12, 2026

Dasara Wishes

BJP DasraWishes_JK DasraWishes JK
Happy Dasara
Home Cinema ಅಪ್ಪು ಕುಟುಂಬಕ್ಕೆ ಸಾಂತ್ವನ ಹೇಳಿದ ನಟ ರಾಮ್ ಚರಣ್

ಅಪ್ಪು ಕುಟುಂಬಕ್ಕೆ ಸಾಂತ್ವನ ಹೇಳಿದ ನಟ ರಾಮ್ ಚರಣ್

ಬೆಂಗಳೂರು, ನವೆಂಬರ್ 03, 2021 (www.justkannada.in): ನಟ ರಾಮ್ ಚರಣ್ ಅವರು ಪುನೀತ್ ರಾಜಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.

ಮನೆಯವರಿಗೆ ಸಾಂತ್ವನ ಹೇಳಿ ಮಾತನಾಡಿದ ಅವರು, ಪುನೀತ್ ರಾಜ್‌ಕುಮಾರ್ ನಿಧನ ಅತಿ ದೊಡ್ಡ ನಷ್ಟ. ನಮ್ಮ ಕುಟುಂಬದ ಸದಸ್ಯನನ್ನು ಕಳೆದುಕೊಂಡಂತಾಗಿದೆ ಎಂದು ರಾಮ್ ಚರಣ್ ಹೇಳಿದರು.

ಈಗಲೂ ಪುನೀತ್ ನಿಧನದ ಸುದ್ದಿ ನಂಬುವುದಕ್ಕೆ ಆಗುತ್ತಿಲ್ಲ. ನಮ್ಮ ಮನೆಗೆ ಬಂದಾಗ ತುಂಬಾ ಆತ್ಮೀಯವಾಗಿ ಇರುತ್ತಿದ್ದರು. ನಾವು ಅವರಿಗೆ ಗೆಸ್ಟ್ ಅನ್ನುವಂತೆ ನಮ್ಮ ಜತೆ ಇರುತ್ತಿದ್ದರು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಮಾನವೀಯ ಮೌಲ್ಯಗಳನ್ನು ಪುನೀತ್​ರಿಂದ ಕಲಿಯಬೇಕು. ವಿ ಲವ್ ಯು ಪುನೀತ್ ರಾಜ್‌ಕುಮಾರ್’’ ಎಂದು ರಾಮ್ ಚರಣ್ ಹೇಳಿದ್ದಾರೆ.