ಲೂಸ್ ಮಾದ ಯೋಗಿ ‘ಒಂಭತ್ತನೇ ದಿಕ್ಕಿ’ಗೆ U/A ಸರ್ಟಿಫಿಕೆಟ್

ಬೆಂಗಳೂರು, ನವೆಂಬರ್ 03, 2021 (www.justkannada.in): ಯೋಗಿ ನಾಯಕ ನಟನಾಗಿ ಅಭಿನಯಿಸಿರುವ ‘ಒಂಭತ್ತನೇ ದಿಕ್ಕು’ ಸಿನಿಮಾಗೆ ಸೆನ್ಸಾರ್ ಮಂಡಳಿಯಿಂದ U/A ಸರ್ಟಿಫಿಕೆಟ್ ದೊರೆತಿದೆ.

ನಿರ್ದೇಶಕ ದಯಾಳ್ ಪದ್ಮನಾಭನ್ ಅವರ ನಿರ್ದೇಶಿಸಿರುವ ಸಿನಿಮಾದಲ್ಲಿ ಯೋಗಿ ಅವರಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ಅವರು ನಟಿಸಿದ್ದಾರೆ.

ಸಿನಿಮಾದಲ್ಲಿ ಎರಡು ಕಥಾಹಂದರ ಜೊತೆಯಾಗಿ ಸಾಗುತ್ತವೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದು, ದಯಾಳ್, ವೆಂಕಟ್ ದೇವ್ ಮತ್ತು ಅಭಿಷೇಕ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.

ಸಾಯಿಕುಮಾರ್, ರಮೇಶ್ ಭಟ್, ಪ್ರಶಾಂತ್ ಸಿದ್ದಿ, ಸಂಪತ್ ಕುಮಾರ್ ಮತ್ತಿತರರು ನಟಿಸಿದ್ದಾರೆ.