ರಾಜ್ಯಸಭೆ ಚುನಾವಣೆ: ಕಾಂಗ್ರೆಸ್ ನವರು ನಮ್ಮನ್ನ ಸಂಪರ್ಕಿಸಿದ್ದಾರೆ-ಜೆಡಿಎಸ್ ಶಾಸಕ ಹೊಸಬಾಂಬ್.

ಯಾದಗಿರಿ,ಫೆಬ್ರವರಿ,24,2024(www.justkannada.in): ಫೆಬ್ರವರಿ 27 ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಯಲ್ಲಿ  ಅಡ್ಡ ಮತದಾನದ ಭೀತಿ ಎದುರಾಗಿದ್ದು ಈ ಮಧ್ಯೆ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್ ಹೊಸಬಾಂಬ್ ಸಿಡಿಸಿದ್ದಾರೆ.

ರಾಜ್ಯಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಸ್ಪರ್ಧೆ ಮಾಡಿದ್ದಾರೆ. ಆದರೆ ಕಾಂಗ್ರೆಸ್ ನವರು ನಮ್ಮನ್ನ  ಸಂಪರ್ಕ ಮಾಡಿದ್ದಾರೆ ಎಂದು ಶಾಸಕ ಶರಣಗೌಡ ಕಂದಕೂರ್ ಹೇಳಿದ್ದಾರೆ.

ಇಂದು ಮಾತನಾಡಿದ ಶಾಸಕ ಶರಣಗೌಡ ಕಂದಕೂರ್, ರಾಜಕೀಯದಲ್ಲಿ ಎಲ್ಲರೂ ಸಂಪರ್ಕ ಮಾಡುವುದು ಸ್ವಾಭಾವಿಕ. ಚುನಾವಣೆ ವೇಳೇ ಸಹಜವಾಗಿ ಬೇರೆ ಪಕ್ಷದವರು ಸಂಪರ್ಕಿಸುತ್ತಾರೆ. ರಾಜ್ಯಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಸ್ಪರ್ಧೆ ಮಾಡಿದ್ದಾರೆ. ಆದರೆ ಕಾಂಗ್ರೆಸ್ ನವರು ನಮ್ಮ ಸಂಪರ್ಕ ಮಾಡಿದ್ದಾರೆ. ಚುನವಣೆಯಲ್ಲಿ ಅಡ್ಡ ಮತದಾನ ಸಹಜ ಪ್ರಕ್ರಿಯೆ ಎಂದು ತಿಳಿಸಿದ್ದಾರೆ.

Key words: Rajya Sabha –Election- Congress – contacted -us – JDS -MLA